ಚಂಡೀಗಢ(ಪಂಜಾಬ್): ವಿಧಾನಸಭಾ ಚುಣಾವಣೆ ಘೋಷಣೆಯಾದ ನಂತರವೂ ಮೌನವಾಗಿದ್ದ ಬಿಎಸ್ಪಿ ವರಿಷ್ಠೆ ಮಾಯಾವತಿ ಪಂಜಾಬ್ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಪಂಜಾಬ್ನಲ್ಲಿ ಬಿಎಸ್ಪಿ ಹೆಚ್ಚು ಕ್ಷೇತ್ರಗಳನ್ನು ಗಳಿಸಲು ಯತ್ನ ನಡೆಸಿದ್ದಾರೆ.
ತಮ್ಮ ತವರು ರಾಜ್ಯ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸದೇ ಮೌನವಾಗಿದ್ದ ಮಾಯಾವತಿ ನವಾನ್ಶಹರ್ನ ಅಕಾಲಿದಳ-ಬಿಎಸ್ಪಿ ಅಭ್ಯರ್ಥಿ ನಚತರ್ ಪಾಲ್ ಪರವಾಗಿ ಮಂಗಳವಾರ ರ್ಯಾಲಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:100 ವರ್ಷ ಕಳೆದ್ರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಸಂಸತ್ನಲ್ಲಿ ಪ್ರಧಾನಿ ಮೋದಿ ಲೇವಡಿ
ಇಷ್ಟು ಮಾತ್ರವಲ್ಲದೇ ಬಂಗಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುಖ್ವಿದರ್ ಸುಖಿ ಮತ್ತು ಬಾಲಾಚೌರ್ನ ಅಭ್ಯರ್ಥಿ ಸುನಿತಾ ಚೌಧರಿ ಪರವಾಗಿಯೂ ಚುನಾವಣಾ ಪ್ರಚಾರ ನಡೆಸಲಿದ್ದು, ಈ ಪ್ರಚಾರ ಕಾರ್ಯಕ್ರಮದಲ್ಲಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಬಾದಲ್ ಮತ್ತು ಹರ್ಸಿಮ್ರತ್ ಕೌರ್ ಬಾದಲ್ ಭಾಗಿಯಾಗಲಿದ್ದಾರೆ.
ಕೊರೊನಾ ಮಾರ್ಗಸೂಚಿಗಳ ಕಾರಣದಿಂದಾಗಿ ಚುನಾವಣಾ ರ್ಯಾಲಿಗಳನ್ನು ನಡೆಸಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಕಾರ್ಯಕರ್ತರ ಬದಲಿಗೆ ಕೇವಲ ರಾಜಕೀಯ ಪಕ್ಷಗಳ ನಾಯಕರು ಮಾತ್ರವೇ ಈ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.