ಕರ್ನಾಟಕ

karnataka

ETV Bharat / bharat

ಇಂದು ಮಾಯಾವತಿ ಹುಟ್ಟುಹಬ್ಬ: ಬಿಎಸ್‍ಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ - ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಜನ್ಮದಿನ. ಹಾಗಾಗಿ, ಇಂದು ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಮಾಯಾವತಿ
ಮಾಯಾವತಿ

By

Published : Jan 15, 2022, 9:06 AM IST

ಲಖನೌ: ಇಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ವರಿಷ್ಠೆ ಮಾಯಾವತಿ ಅವರ ಜನ್ಮದಿನ. ಈ ಹಿನ್ನೆಲೆ ಇಂದು ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಬಿಎಸ್‌ಪಿ ನಾಯಕಿ ಮಾಯಾವತಿ 66 ನೇ ಹುಟ್ಟುಹಬ್ಬವನ್ನು ಇಂದು ಪಕ್ಷದ ಕಾರ್ಯಕರ್ತರು ಜನಕಲ್ಯಾಣಕಾರಿ ದಿನ ಎಂದು ಆಚರಿಸಲಿದ್ದಾರೆ. ಜೊತೆಗೆ ಇದೇ ಸಂದರ್ಭದಲ್ಲಿ ಅವರ ಹೋರಾಟದ ಬದುಕಿನ ಬ್ಲೂ ಬುಕ್ ಮತ್ತು ಬಿಎಸ್‌ಪಿ ಚಳವಳಿಯ ಪಯಣ ಭಾಗ -17 ಮತ್ತು ಇಂಗ್ಲಿಷ್ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದಾರೆ.

ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಎಸ್‌ಪಿ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಫೆಬ್ರವರಿ 10 ರಿಂದ ಉತ್ತರ ಪ್ರದೇಶದ ಚುನಾವಣೆ ಆರಂಭಗೊಳ್ಳಲಿದೆ. ಕೊನೆಯ ಹಂತದ ಚುನಾವಣೆ ಮಾರ್ಚ್ 7ರಂದು ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಓದಿ:ನವೋದಯ ವಿದ್ಯಾಲಯದಲ್ಲಿ ಕೊರೊನಾ ಸ್ಫೋಟ: 20 ಮಕ್ಕಳು ಸೇರಿ 33 ಮಂದಿಗೆ ಕೋವಿಡ್​ ದೃಢ

ABOUT THE AUTHOR

...view details