ಕರ್ನಾಟಕ

karnataka

ETV Bharat / bharat

ಯುಪಿಯಲ್ಲಿ ಬಿಜೆಪಿ ಮಣಿಸಲು ಬಿಎಸ್​​ಪಿ ಕಾರ್ಯತಂತ್ರ: ಬ್ರಾಹ್ಮಣ ಮಹಾಸಮ್ಮೇಳನದ ಮೂಲಕ ಮತಬೇಟೆ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ವರ್ಷಗಳೇ ಬಾಕಿ ಇರುವಾಗ ಪಕ್ಷಗಳು ಭರದ ಸಿದ್ಧತೆ ನಡೆಸಿವೆ. ಈಗಲೇ ಬಿಎಸ್​​ಪಿ ಪಕ್ಷವು ಬ್ರಾಹ್ಮಣ ಮತ ಸೆಳೆಯಲು ಬ್ರಾಹ್ಮಣ ಮಹಾ ಸಮ್ಮೇಳನ ನಡೆಸಲು ಮುಂದಾಗಿದೆ. ಪ್ರಯಾಗ್​​ರಾಜ್​ನಲ್ಲಿಂದು ಸಮ್ಮೇಳನ ನಡೆಯಲಿದೆ.

bsp-national-general-secretary-satish-chandra-mishra-and-former-minister-nakul-dubey-targeted-bjp-in-prayagraj
ಬ್ರಾಹ್ಮಣ ಸಮಾವೇಶದ ಮೂಲಕ ಮತಬೇಟೆ

By

Published : Jul 28, 2021, 8:02 AM IST

ಅಯೋಧ್ಯೆ (ಉ.ಪ್ರ): ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ ಬಿಎಸ್​​​ಪಿ ಈಗಿನಿಂದಲೇ ತಯಾರಿ ನಡೆಸಿದೆ. ಇದರ ನಿಮಿತ್ತ ರಾಜ್ಯದಲ್ಲಿ ಬ್ರಾಹ್ಮಣ ಮಹಾಸಮ್ಮೇಳನಗಳ ಹಮ್ಮಿಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆ ಬಿಎಸ್​ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಸೋಮವಾರ ಪ್ರಯಾಗ್​​ರಾಜ್ ತಲುಪಿದ್ದಾರೆ.

ಇದಲ್ಲದೇ ಮುಂಬರುವ ಚುನಾವಣೆಯಲ್ಲಿ ಪಕ್ಷವೂ ಯಾವೊಂದು ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ. ಜೊತೆಗೆ ಪ್ರಯಾಗ್​​ರಾಜ್​ನಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬ್ರಾಹ್ಮಣ ಮಹಾಸಮ್ಮೇಳನ ನಡೆಯಲಿದೆ ಎಂದಿದ್ದಾರೆ. 2007ರ ಚುನಾವಣೆಯಲ್ಲಿ ಜಯಗಳಿಸಿ ಸ್ವಂತ ಬಲದಿಂದ ಸರ್ಕಾರ ರಚಿಸಿದಂತೆಯೇ ಮುಂದೆಯೂ ಬಹುಜನ ಸಮಾಜ ಪಕ್ಷವು ಸರ್ಕಾರ ರಚಿಸಲಿದೆ ಎಂದಿದ್ದಾರೆ.

ಮುಂದುವರಿದು, ಎಐಎಂಐಎಂ ಪಕ್ಷವು ಬಿಜೆಪಿಯ ಆದೇಶದಂತೆ ಯುಪಿಯಲ್ಲಿ ಸ್ಪರ್ಧಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ, ಅವರು ಸಹ ಸ್ಪರ್ಧೆ ಮಾಡಲಿ. ಎಐಎಂಐಎಂ ಪಕ್ಷದೊಂದಿಗೂ ಸಹ ಮೈತ್ರಿ ಮಾಡಿಕೊಳ್ಳುವುದಿಲ್ಲ. ಆದರೆ, ಪಂಜಾಬ್​​ನಲ್ಲಿ ಶಿರೋಮಣಿ ಅಕಾಲಿ ದಳದೊಂದಿಗೆ ಮಾತ್ರ ಮೈತ್ರಿ ಇದೆ ಎಂದು ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಇದು ಬಿಟ್ಟು ಬೇರೆ ಯಾವ ಪಕ್ಷದೊಂದಿಗೂ ಮೈತ್ರಿ ಇಲ್ಲ ಎಂದು ಸತೀಶ್ ಚಂದ್ರ ಮಿಶ್ರಾ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಶಿಯೋಪುರದಲ್ಲಿ ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆ ಮಾಡಿದ ಎಸ್​​ಡಿಆರ್​ಎಫ್ ಪಡೆ

ABOUT THE AUTHOR

...view details