ಲಖನೌ(ಉತ್ತರಪ್ರದೇಶ) :ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ 4ನೇ ಹಂತದ ಮತದಾನ ನಡೆಯುತ್ತಿದೆ. ಬಹುಜನ ಸಮಾಜವಾದಿ ಪಕ್ಷದ(ಬಿಎಸ್‌ಪಿ) ನಾಯಕಿ ಮಾಯಾವತಿ ಅವರು ಲಖನೌದ ಮುನ್ಸಿಪಲ್ ನರ್ಸರಿ ಶಾಲೆಯಲ್ಲಿ ಮತದಾನ ಮಾಡಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಾಯಾವತಿ ಅವರು, ಸಮಾಜವಾದಿ ಪಕ್ಷವನ್ನು ಜನರು ಚುನಾವಣೆಗೂ ಮೊದಲೇ ತಿರಸ್ಕರಿಸಿದ್ದಾರೆ. ಸಮಾಜವಾದಿ ಪಕ್ಷವೆಂದರೇನೆ ಗೂಂಡಾ ಪಕ್ಷ. ಈ ಪಕ್ಷಕ್ಕೆ ಮತ ಹಾಕುವುದೆಂದರೆ 'ಗೂಂಡಾರಾಜ್, ಮಾಫಿಯಾ ರಾಜ್'ಗೆ ಮತ ಹಾಕಿದಂತೆ ಎಂದು ಟೀಕಿಸಿದ್ದಾರೆ.
ಸಮಾಜವಾದಿ ಪಕ್ಷದಿಂದ ಮುಸ್ಲಿಂ ಮತದಾರರು ದೂರವಿದ್ದಾರೆ. ಈ ಪಕ್ಷ ಅಧಿಕಾರದಲ್ಲಿದ್ದಾಗ ಹಲವಾರು ಬಾರಿ ಕೋಮುಗಲಭೆ ನಡೆದಿವೆ. ಮತ್ತೆ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.