ಲಖನೌ (ಉತ್ತರ ಪ್ರದೇಶ):ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಜಾರಿಗೆ ತಂದಿರುವ ಲವ್ ಜಿಹಾದ್ ವಿರುದ್ಧದ ನೂತನ 'ಮತಾಂತರ ನಿಷೇಧ 2020' ಕಾನೂನನ್ನು ಮರು ಪರಿಶೀಲಿಸುವಂತೆ ಯುಪಿ ಸರ್ಕಾರವನ್ನು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಒತ್ತಾಯಿಸಿದ್ದಾರೆ.
'ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ ತರಾತುರಿಯಲ್ಲಿ ತಂದ ಸುಗ್ರೀವಾಜ್ಞೆಯು ಅನುಮಾನಗಳಿಂದ ಕೂಡಿದೆ. ದೇಶದಲ್ಲಿ ಬಲವಂತದ ಮತ್ತು ಮೋಸದ ಧಾರ್ಮಿಕ ಮತಾಂತರವು ಸ್ವೀಕಾರಾರ್ಹವಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಕಾನೂನುಗಳು ಜಾರಿಯಲ್ಲಿವೆ. ಆದರೆ, ಈ ಕಾನೂನನ್ನು ಸರ್ಕಾರ ಮರುಪರಿಶೀಲಿಸಬೇಕೆಂದು ಬಿಎಸ್ಪಿ ಒತ್ತಾಯಿಸುತ್ತದೆ' ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.