ದೆಹಲಿ :ದೇಶಾದ್ಯಂತ 4G ಟೆಲಿಕಾಂ ನೆಟ್‌ವರ್ಕ್ ಸೇವೆ ನೀಡಲು ಬಿಎಸ್ಎನ್ಎಲ್ ಮುಂದಾಗಿದೆ. ಸುಮಾರು 1.12 ಲಕ್ಷ ಟವರ್‌ಗಳನ್ನು ಅಳವಡಿಸಲು ಯೋಜನೆ ರೂಪಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಹೇಳಿದ್ದಾರೆ.'ಶೀಘ್ರದಲ್ಲೇ ಬಿಎಸ್ಎಲ್ಎಲ್ 4G ಟೆಲಿಕಾಂ ನೆಟ್‌ವರ್ಕ್ ಹೊರತರಲು ಸಿದ್ಧವಾಗಿದೆ ಎಂಬುದನ್ನು ಹೇಳಲು ನನಗೆ ಸಂತೋಷವಾಗುತ್ತಿದೆ. ದೇಶದ ಇಂಜಿನಿಯರ್ಗಳು ಹಾಗೂ ವಿಜ್ಞಾನಿಗಳು ಈ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದ್ದಾರೆ.
ದೇಶವು 4G ನೆಟ್‌ವರ್ಕ್ ಅಬಿವೃದ್ದಿಪಡಿಸಿರುವುದನ್ನು ವಿಶ್ವದಾದ್ಯಂತ ಪ್ರಶಂಸಿಸಲಾಗುತ್ತಿದೆ. ಇದು ಸಂಪೂರ್ಣ ಕೋರ್ ನೆಟ್‌ವರ್ಕ್, ರೇಡಿಯೊ ನೆಟ್‌ವರ್ಕ್ ಅನ್ನು ಹೊಂದಿದೆ' ಎಂದು ಪ್ರಶ್ನೋತ್ತರ ವೇಳೆಯಲ್ಲಿ ಅವರು ಹೇಳಿದರು. ಬಿಎಸ್ಎನ್ಎಲ್ ತಕ್ಷಣವೇ 6,000 ಟವರ್‌ಗಳನ್ನು ಆರ್ಡರ್ ಮಾಡುವ ಪ್ರಕ್ರಿಯೆಯಲ್ಲಿದೆ.