ಕರ್ನಾಟಕ

karnataka

ETV Bharat / bharat

ಬಹುದೊಡ್ಡ ನಕ್ಸಲ್ ಸಂಚು ವಿಫಲಗೊಳಿಸಿದ ಒಡಿಶಾ ಪೊಲೀಸ್​, ಬಿಎಸ್​ಎಫ್ - ಟಿಫಿನ್ಸ್ ಬಾಕ್ಸ್​ನ ಸುಧಾರಿತ ಸ್ಪೋಟಕ

ಒಡಿಶಾ ಮತ್ತು ಆಂಧ್ರ ಪ್ರದೇಶದ ಗಡಿ ಭಾಗದಲ್ಲಿರುವ ಸ್ವಾಭಿಮಾನ್ ಅಂಚಲ್ ಎಂಬ ಪ್ರದೇಶದಲ್ಲಿ ಸುಧಾರಿತ ಸ್ಫೋಟಕಗಳನ್ನು ಪತ್ತೆ ಮಾಡಲಾಗಿದೆ.

BSF unearths IEDs in Odisha's Swabhiman Anchal
ಬಹುದೊಡ್ಡ ನಕ್ಸಲ್ ಸಂಚು ವಿಫಲಗೊಳಿಸಿ ಬಿಎಸ್​ಎಫ್

By

Published : Jun 22, 2021, 11:03 AM IST

ಮಲ್ಕನ್​ಗಿರಿ(ಒಡಿಶಾ):ನೆಲದಲ್ಲಿ ಹುದುಗಿಸಿದ್ದ ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಒಡಿಶಾದ ಮಲ್ಕನ್​ಗಿರಿ ಪೊಲೀಸರು ಮತ್ತು ಗಡಿ ಭದ್ರತಾ ಪಡೆಯ ಯೋಧರು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಭದ್ರತಾ ಪಡೆಯ ವಿರುದ್ಧ ನಕ್ಸಲರು ರೂಪಿಸಿದ್ದ ಬಹುದೊಡ್ಡ ಸಂಚನ್ನು ವಿಫಲಗೊಳಿಸಿದ್ದಾರೆ.

ಒಡಿಶಾ ಮತ್ತು ಆಂಧ್ರ ಪ್ರದೇಶದ ಗಡಿ ಭಾಗದಲ್ಲಿರುವ ಸ್ವಾಭಿಮಾನ್ ಅಂಚಲ್ ಎಂಬ ಪ್ರದೇಶದಲ್ಲಿ ಸುಧಾರಿತ ಸ್ಫೋಟಕಗಳನ್ನು ಹೊರ ತೆಗೆಯಲಾಗಿದೆ ಎಂದು ಗಡಿ ಭದ್ರತಾ ಪಡೆಯ ಒಡಿಶಾ ವಿಭಾಗ ಟ್ವೀಟ್ ಮಾಡಿದೆ.

ಇದೇ ತಿಂಗಳ ಆರಂಭದಲ್ಲಿ ಮಲ್ಕನ್​ಗಿರಿ ಜಿಲ್ಲೆಯ ಮಂಡಪಲ್ಲಿ ಏರಿಯಾದಲ್ಲಿ ಒಡಿಶಾ ಪೊಲೀಸರು ಮತ್ತು ಗಡಿ ಭದ್ರತಾ ಪಡೆಯ ಯೋಧರು ಟಿಫಿನ್ಸ್ ಬಾಕ್ಸ್​ನ ಸುಧಾರಿತ ಸ್ಪೋಟಕಗಳನ್ನು ಜಪ್ತಿ ಮಾಡಿದ್ದರು.

ಇದನ್ನೂ ಓದಿ:3 ತಿಂಗಳ ಬಳಿಕ ದೇಶದಲ್ಲಿ ಅತಿ ಕಡಿಮೆ ಕೋವಿಡ್ ಕೇಸ್​ ಪತ್ತೆ

ಇನ್ನು ಛತ್ತೀಸ್​ಗಢದ ನಾರಾಯಣಪುರ ಜಿಲ್ಲೆಯಲ್ಲಿ ಜೂನ್ 20ರಂದು ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರು ನಕ್ಸಲರನ್ನು ಹೊಡೆದುರುಳಿಸಿದ್ದು, ಹಲವು ಶಸ್ತ್ರಾಸ್ತ್ರಗಳನ್ನ ಜಪ್ತಿ ಮಾಡಿದ್ದರು.

ABOUT THE AUTHOR

...view details