ಜಮ್ಮು-ಕಾಶ್ಮೀರ: ಗಡಿ ಭದ್ರತಾ ಪಡೆ (BSF) ಇಂದು 57ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಬಿಎಸ್‌ಎಫ್ ದೇಶದ ಮೊದಲ ಭದ್ರತಾ ಪಡೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇತರ ಪ್ರತಿಕೂಲ ಪರಿಸ್ಥಿತಿಗಳಲ್ಲೂ ಭಾರತದ ಗಡಿಗಳನ್ನು ರಕ್ಷಿಸುತ್ತಿದೆ.
2021ರ ಡಿಸೆಂಬರ್ 1 ರಂದು ಬಿಎಸ್‌ಎಫ್ ತನ್ನ 57ನೇ ವರ್ಷಕ್ಕೆ ಕಾಲಿಟ್ಟಿದ್ದು, ಮಾತೃಭೂಮಿಯ ಸೇವೆಯಲ್ಲಿ ನಮ್ಮ ಪ್ರಯಾಣ ಶಾಶ್ವತವಾಗಿ ಮುಂದುವರಿಯುತ್ತದೆ. ಇದು ಸೇವೆ ಮತ್ತು ರಕ್ಷಣೆಗೆ ಗೌರವವಾಗಿದೆ. ನಾವು ಶಾಶ್ವತವಾಗಿ ಉಳಿಸಿಕೊಳ್ಳುವ ಜೀವನ ಪರ್ಯಂತ ಕರ್ತವ್ಯ ಎಂದು ಬಿಎಸ್ಎಫ್ ಟ್ವೀಟ್ ಮಾಡಿದೆ.