ಕರ್ನಾಟಕ

karnataka

ETV Bharat / bharat

ಪೂಂಚ್‌ನಲ್ಲಿ ಗಣಿ ಸ್ಫೋಟ : ಬಿಎಸ್‌ಎಫ್ ಸೈನಿಕನಿಗೆ ಗಂಭೀರ ಗಾಯ - ಬಿಎಸ್‌ಎಫ್ ಸೈನಿಕನಿಗೆ ಗಂಭೀರ ಗಾಯ

ಗಾಯಗೊಂಡ ಯೋಧನನ್ನು ಹೆಲಿಕಾಪ್ಟರ್ ಮೂಲಕ ಉಧಂಪುರಕ್ಕೆ ಸ್ಥಳಾಂತರಿಸಲಾಗಿದೆ. ಹಾಗೆ ಯೋಧನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ..

ಬಿಎಸ್‌ಎಫ್ ಸೈನಿಕನಿಗೆ ಗಂಭೀರ ಗಾಯ
ಬಿಎಸ್‌ಎಫ್ ಸೈನಿಕನಿಗೆ ಗಂಭೀರ ಗಾಯ

By

Published : Dec 20, 2021, 6:09 PM IST

ಪೂಂಚ್: ಜಮ್ಮುವಿನ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ನಡೆದ ಗಣಿ ಸ್ಫೋಟದಲ್ಲಿ ಬಿಎಸ್‌ಎಫ್ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪೂಂಚ್ ಜಿಲ್ಲೆಯ ಬಾಲಾಕೋಟ್ ಸೆಕ್ಟರ್‌ನ ಡೋಗ್ರಾ ಟೆಕ್ರಿಯಲ್ಲಿ ನಿಯೋಜಿಸಲಾದ 146 ಬೆಟಾಲಿಯನ್ ಬಿಎಸ್‌ಎಫ್‌ನ ಕಾನ್‌ಸ್ಟೆಬಲ್ ಅಜಿಶ್ ಕೆ ಬೇಲಿಯಲ್ಲಿ ಕರ್ತವ್ಯದಲ್ಲಿದ್ದಾಗ ಅವರ ಮುಖ ಮತ್ತು ಎರಡೂ ಕೈಗಳು ಗಣಿ ಸ್ಫೋಟದಿಂದಾಗಿ ಗಾಯಗಳಾಗಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಜನಮನ ಸೂರೆಗೊಂಡ ರಾಜ್ಯ ಮಟ್ಟದ ಶ್ವಾನ ಪ್ರದರ್ಶನ: ಚಾರ್ಲಿ ಸಿನಿಮಾದ ನಾಯಿ ಕೂಡ ಭಾಗಿ!

ಗಾಯಗೊಂಡ ಯೋಧನನ್ನು ಹೆಲಿಕಾಪ್ಟರ್ ಮೂಲಕ ಉಧಂಪುರಕ್ಕೆ ಸ್ಥಳಾಂತರಿಸಲಾಗಿದೆ. ಹಾಗೆ ಯೋಧನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ABOUT THE AUTHOR

...view details