ಕರ್ನಾಟಕ

karnataka

ಹೆರಾಯಿನ್ ಹೊತ್ತ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

By

Published : Dec 5, 2022, 10:55 PM IST

ಭಾರತದ ಗಡಿಯಲ್ಲಿ ಗಸ್ತು ನಡೆಸುತ್ತಿದ್ದ ಬಿಎಸ್ಎಫ್ ಸಿಬ್ಬಂದಿ ಪಾಕಿಸ್ತಾನದ ಕಳ್ಳಸಾಗಾಣಿಕೆದಾರರ ದುಷ್ಕೃತ್ಯವನ್ನು ವಿಫಲಗೊಳಿಸಿದ್ದಾರೆ.

BSF soldiers shot down a heroin carrying drone
ಹೆರಾಯಿನ್ ಹೊತ್ತ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್ ಯೋಧರು

ಅಮೃತಸರ: ಭಾರತದ ಗಡಿಯಲ್ಲಿ ಗಸ್ತು ನಡೆಸುತ್ತಿದ್ದ ಬಿಎಸ್ಎಫ್ ಸಿಬ್ಬಂದಿ ಶನಿವಾರ ರಾತ್ರಿ ಪಾಕಿಸ್ತಾನದ ಕಳ್ಳಸಾಗಾಣೆದಾರರ ಡ್ರೋನ್ ಹೊಡೆದುರುಳಿಸಿದ್ದಾರೆ. ಈ ಡ್ರೋನ್​ಗೆ 1 ಕೆಜಿ ಹೆರಾಯಿನ್ ಸರಕು ಕಟ್ಟಲಾಗಿತ್ತು. ಅಮೃತಸರದ ಗಡಿ ಪ್ರದೇಶ ರೋಡೆವಾಲಾ ಕಲಾನ್‌ನಲ್ಲಿ ಕಾರ್ಯಾಚರಣೆ ನಡೆದಿದೆ. ಇದು ಕ್ವಾಡ್ ಕೋರ್ ಸಣ್ಣ ಡ್ರೋನ್ ಆಗಿದ್ದು, ಒಂದರಿಂದ ಎರಡು ಕೆ.ಜಿಯಷ್ಟು ತೂಕದ ವಸ್ತುಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.

ABOUT THE AUTHOR

...view details