ಕೂಚ್ ಬೆಹಾರ್( ಪಶ್ಚಿಮಬಂಗಾಳ): ಭಾರತ- ಬಾಂಗ್ಲಾದೇಶದ ಗಡಿಯಲ್ಲಿರುವ ಸಿತಾಲ್ಕುಚಿ ಬ್ಲಾಕ್‌ನಲ್ಲಿ ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿಗೆ ಬಿಎಸ್‌ಎಫ್ ಯೋಧನೊಬ್ಬ ತನ್ನ ಸರ್ವೀಸ್ ರೈಫಲ್ನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನಲ್ಲಬೋತುಲ ನಾರಾಯಣ ಸ್ವಾಮಿ ಆತ್ಮಹತ್ಯೆಗೆ ಶರಣಾದ ಯೋಧ. ಸೀತಾಲ್ಕುಚಿಯ ಗಾಡೋಪೋಟಾ ಗ್ರಾಮದ ಅಮೃತ್ ಕ್ಯಾಂಪ್ನಲ್ಲಿ ಈ ಘಟನೆ ನಡೆದಿದೆ.
ಘಟನೆ ನಡೆದ ತಕ್ಷಣ ಇತರ ಬಿಎಸ್ಎಫ್ ಯೋಧರು ಅವರನ್ನು ಸಿತಾಲ್ಕುಚಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷೆ ನಡೆಸಿ ಯೋಧ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕೂಚ್ ಬೆಹರ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, ಯೋಧ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಕೂಚ್ ಬೆಹಾರ್ನ ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಸಿತಾಲ್ಕುಚಿ ಬ್ಲಾಕ್ನ ಗಡೋಪೊಟಾ ಗ್ರಾಮದ ಅಮೃತ್ ಕ್ಯಾಂಪ್ನಲ್ಲಿ ಶುಕ್ರವಾರ ಮುಂಜಾನೆ ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿಸಿದೆ.
ಬಿಎಸ್ಎಫ್ ಮೂಲಗಳ ಪ್ರಕಾರ, ಯೋಧ ನಲ್ಲಬೋತುಲಾ ನಾರಾಯಣ ಸ್ವಾಮಿ ಅವರು ಕರ್ತವ್ಯದಲ್ಲಿದ್ದಾಗ ತಮ್ಮ ಸರ್ವಿಸ್ ರೈಫಲ್ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯೋಧನಿಗೆ ಕೆಲವು ಕೌಟುಂಬಿಕ ಸಮಸ್ಯೆಗಳಿದ್ದವು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅದಕ್ಕಾಗಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿಸಿದ್ದಾರೆ. ಯೋಧನ ಆತ್ಮಹತ್ಯೆಗೆ ನಿಜವಾದ ಕಾರಣ ಏನು ಎಂಬುದು ತನಿಖೆಯ ನಂತರ ತಿಳಿಯುತ್ತದೆ ಎಂದು ಶಿತಾಲ್ಕುಚಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಮೃತುಂಜಯ್ ಚಕ್ರವರ್ತಿ ಹೇಳಿದ್ದಾರೆ.