ಕರ್ನಾಟಕ

karnataka

ETV Bharat / bharat

PM Security Breach: ಪ್ರಧಾನಿಗೆ ಭದ್ರತಾ ಲೋಪವಾಗಿದ್ದ ಫಿರೋಜ್​ಪುರದಲ್ಲಿ ಪಾಕ್ ಬೋಟ್ ಜಪ್ತಿ - ಪ್ರಧಾನಿ ಮೋದಿಗೆ ಪಂಜಾಬ್​ನಲ್ಲಿ ಭದ್ರತಾ ಲೋಪ

ಪಂಜಾಬ್ ರಾಜ್ಯದ ಜಿಲ್ಲೆಯಾಗಿರುವ, ಪ್ರಧಾನಿ ಮೋದಿಗೆ ಭದ್ರತಾ ಲೋಪವಾಗಿರುವ ಜಿಲ್ಲೆಯ ಔಟ್​ಪೋಸ್ಟ್​ನಲ್ಲಿ ಪಾಕಿಸ್ತಾನದ ಬೋಟ್ ಪತ್ತೆಯಾಗಿದ್ದು, ಬಿಎಸ್​ಎಫ್ ಸಿಬ್ಬಂದಿ ಬೋಟ್​ ಅನ್ನು ಜಪ್ತಿ ಮಾಡಿದ್ದಾರೆ.

BSF seizes Pakistani boat near Ferozepur in Punjab
PM Security Breach: ಪ್ರಧಾನಿಗೆ ಭದ್ರತಾ ಲೋಪವಾಗಿದ್ದ ಜಿಲ್ಲೆಯಲ್ಲೇ ಪಾಕ್ ಬೋಟ್ ಜಪ್ತಿ

By

Published : Jan 8, 2022, 10:35 AM IST

ನವದೆಹಲಿ:ಪ್ರಧಾನಿ ಮೋದಿಗೆ ಭದ್ರತಾ ಲೋಪದ ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವಾಗಲೇ ಭದ್ರತಾ ಲೋಪವೆಸಗಲಾಗಿದ್ದ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಗಡಿಭಾಗದ ಔಟ್​ ಪೋಸ್ಟ್​ ಬಳಿ ಬಿಎಸ್‌ಎಫ್ ಪಾಕಿಸ್ತಾನದ ದೋಣಿಯನ್ನು ಶುಕ್ರವಾರ ವಶಕ್ಕೆ ಪಡೆದುಕೊಂಡಿದೆ.

ಫಿರೋಜ್‌ಪುರ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಂತಿರುವ ಪಂಜಾಬ್ ರಾಜ್ಯದ ಜಿಲ್ಲೆಯಾಗಿದ್ದು, ಭದ್ರತೆಯ ವಿಚಾರದಲ್ಲಿ ಅತ್ಯಂತ ಸೂಕ್ಷ್ಮ ಜಿಲ್ಲೆಯಾಗಿದೆ. ಈ ಮೊದಲು ಪಾಕಿಸ್ತಾನದ ಹಲವು ಡ್ರೋನ್‌ಗಳು ಈ ಜಿಲ್ಲೆಯಲ್ಲಿ ಹಾರಾಡುತ್ತಿದ್ದು, ಬಿಎಸ್​ಎಫ್ ಹಲವು ಬಾರಿ ಈ ಡ್ರೋನ್​ಗಳನ್ನು ಹೊಡೆದುರುಳಿಸಿತ್ತು.

ಗಡಿಯಲ್ಲಿರುವ ಡಿಟಿ ಮಾಲ್ ಔಟ್‌ಪೋಸ್ಟ್ ಬಳಿ ಬಿಎಸ್​ಎಫ್​ನ 136ನೇ ಬೆಟಾಲಿಯನ್‌ಗೆ ಸೇರಿದ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಮರದ ದೋಣಿಯನ್ನು ಗಮನಿಸಿ, ಅದನ್ನು ವಶಕ್ಕೆ ಪಡೆದಿದ್ದಾರೆ ಎಂದು ಬಿಎಸ್‌ಎಫ್​ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಚಳಿಗಾಲವಾದ ಕಾರಣದಿಂದ ಈ ಪ್ರದೇಶದ ಪೂರ್ತಿ ಮಂಜಿನಿಂದ ಕೂಡಿತ್ತು. ದೋಣಿ ವಶಕ್ಕೆ ಪಡೆದ ನಂತರ ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಕಂಡರೆ ಬಿಎಸ್ಎಫ್​ಗೆ ಮಾಹಿತಿ ನೀಡಲು ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಸೂಚನೆ ನೀಡಿದ್ದೇವೆ. ಸಾಮಾನ್ಯವಾಗಿ ಶಸ್ತ್ರಗಳನ್ನು ಮತ್ತು ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಇಂತಹ ಬೋಟ್​ಗಳನ್ನು ಬಳಸಲಾಗುತ್ತದೆ ಎಂದು ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಭದ್ರತಾ ಲೋಪದ ತನಿಖೆ: ಪಂಜಾಬ್ ಡಿಜಿಪಿ ಸೇರಿ ಉನ್ನತಾಧಿಕಾರಿಗಳಿಗೆ ನೋಟಿಸ್

ABOUT THE AUTHOR

...view details