ಫಜಿಲ್ಕಾ(ಪಂಜಾಬ್): ಪಾಕಿಸ್ತಾನದನಾಲ್ಕು ವರ್ಷದ ಮಗುವೊಂದು ಪೋಷಕರಿಂದ ತಪ್ಪಿಸಿಕೊಂಡು ಭಾರತದ ಗಡಿಯೊಳಗೆ ಬಂದಿದ್ದು, ಗಡಿ ಭದ್ರತಾ ಪಡೆ ಸಿಬ್ಬಂದಿ ಪಾಕ್ ರೇಂಜರ್ಗಳಿಗೆ ಮರಳಿಸಿದ್ದಾರೆ. ಅಬೋಹರ್ ಸೆಕ್ಟರ್ನಲ್ಲಿ ಬಿಎಸ್‌ಎಫ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಮಗುವನ್ನು ನೋಡಿದ್ದು, ತಕ್ಷಣವೇ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಪಾಕಿಸ್ತಾನದ ರೇಂಜರ್ಗಳನ್ನು ಸಂಪರ್ಕಿಸಿ ಹಸ್ತಾಂತರಿಸಲಾಗಿದೆ ಎಂದು ಬಿಎಸ್‌ಎಫ್ ಪಂಜಾಬ್ ಫ್ರಂಟಿಯಾರ್ಸ್ ಟ್ವೀಟ್ ಮಾಡಿದೆ.
ಭಾರತದ ಗಡಿಯೊಳಗೆ ಬಂದ ಪಾಕ್ ಮಗು ಮರಳಿಸಿದ ಬಿಎಸ್‌ಎಫ್ - ಭಾರತದ ಗಡಿಯೊಳಗೆ ನಾಲ್ಕು ವರ್ಷದ ಬಾಲಕಿ
ಪಾಕಿಸ್ತಾನದ ನಾಲ್ಕು ವರ್ಷದ ಮಗುವೊಂದು ಭಾರತದ ಗಡಿಯೊಳಗೆ ಬಂದಿದ್ದು, ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಪಾಕ್ ರೇಂಜರ್ಸ್‌ಗೆ ಹಸ್ತಾಂತರಿಸಿದರು.
four-year-old girl to Pak Rangers in Fazilka
ಈ ಹಿಂದೆಯೂ ಇಂತಹ ಕೆಲವು ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಪಾಕಿಸ್ತಾನದ ಬಾಲಕಿ ಭಾರತದ ಗಡಿಯೊಳಗೆ ನುಗ್ಗಿದ್ದು, ಮಾನವೀಯತೆಯ ಆಧಾರದ ಮೇಲೆ ಹಸ್ತಾಂತರಿಸಲಾಗಿದೆ ಎಂದು ಭಾರತೀಯ ಗಡಿ ಭದ್ರತಾ ಪಡೆ ತಿಳಿಸಿದೆ.