ಬಲೂರ್‌ಘಾಟ್ (ಪಶ್ಚಿಮ ಬಂಗಾಳ): ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಸೋಮವಾರ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) 137 ಬೆಟಾಲಿಯನ್ ಯೋಧರ ತಂಡವು ದ್ರವ ರೂಪದಲ್ಲಿರುವ ಹಾವಿನ ವಿಷ ತುಂಬಿದ ಗಾಜಿನ ಜಾರ್ಅನ್ನು ವಶಪಡಿಸಿಕೊಂಡಿದೆ. ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಹಿಲ್ಲಿಯ ಗೋಶ್‌ಪುರ ಬಿಒಪಿಯ ಪಹಾನ್ ಪಾರಾ ಗಡಿಯಲ್ಲಿ ಹಾವಿನ ವಿಷದ ಜಾರ್ ಬಿಎಸ್ಎಫ್ ಪತ್ತೆ ಹಚ್ಚಿದೆ. ಈ ವಿಷದ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ 13 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ:ಉಮೇಶ್ ಪಾಲ್ ಹತ್ಯೆ ಪ್ರಕರಣ: ಆರೋಪಿ ಗುಡ್ಡು ಮುಸ್ಲಿಂ ಮನೆ ಧ್ವಂಸಗೊಳಿಸಲು ಪೊಲೀಸರಿಂದ ಸಿದ್ಧತೆ
ಇಬ್ಬರು ಕಳ್ಳಸಾಗಣೆದಾರರು ಪರಾರಿ:ಇಬ್ಬರು ಕಳ್ಳಸಾಗಣೆದಾರರು ಹಾವಿನ ವಿಷವಿರುವ ಗಾಜಿನ ಜಾರ್ ಅನ್ನು ಗಡಿಯ ಮೂಲಕ ಬಾಂಗ್ಲಾದೇಶಕ್ಕೆ ಸಾಗಿಸುವ ಬಗ್ಗೆ ಗುಪ್ತಚರ ಇಲಾಖೆಯ ರಹಸ್ಯ ಮೂಲಗಳಿಂದ ಮಾಹಿತಿ ಬಂದಿದೆ ಎಂದು ಬಿಎಸ್ಎಫ್ ಮಾಹಿತಿ ನೀಡಿದೆ. ಅದರಂತೆ ಸೋಮವಾರ ಮಧ್ಯರಾತ್ರಿ 12.30ರ ಸುಮಾರಿಗೆ ಬಿಎಸ್‌ಎಫ್ ತಂಡ ಗಡಿಭಾಗದ ಭಾರತದ ವ್ಯಾಪ್ತಿಗೆ ಬರುವ ಗ್ರಾಮ ಪಹನ್‌ಪಾರಾ ಪ್ರದೇಶದಲ್ಲಿ ರಹಸ್ಯವಾಗಿ ಕಾಯಲು ಆರಂಭಿಸಿತು.
ಇದನ್ನೂ ಓದಿ:ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು 3 ಕಿ.ಮೀ ಎಳೆದೊಯ್ದ ಚಾಲಕ!
ಸ್ವಲ್ಪ ಸಮಯದ ನಂತರ, ಬಾಂಗ್ಲಾದೇಶದಿಂದ ಇಬ್ಬರು ಕಳ್ಳಸಾಗಣೆದಾರರು ಗಡಿಯ ಕಡೆಗೆ ಬಂದರು. ಅವರು ಭಾರತದ ಭೂ ಪ್ರದೇಶವನ್ನು ಪ್ರವೇಶಿಸಿದ ತಕ್ಷಣ, ಬಿಎಸ್ಎಫ್ ಯೋಧರು ಅವರನ್ನು ನಿಲ್ಲಿಸಲು ಹೇಳಿದರು. ಆದರೆ, ಇಬ್ಬರು ಬಾಂಗ್ಲಾದೇಶದ ಕಡೆಗೆ ಓಡಲಾರಂಭಿಸಿದರು. ಅವರನ್ನು ತಡೆಯಲು ಬಿಎಸ್ಎಫ್ ಸಿಬ್ಬಂದಿ ಒಂದು ಸುತ್ತಿನ ಗುಂಡು ಹಾರಿಸಿದರು.