ಕರ್ನಾಟಕ

karnataka

ETV Bharat / bharat

ಸ್ವಾತಂತ್ರ್ಯ ದಿನಾಚರಣೆ: ಕಚ್‌ನಲ್ಲಿ ಗಡಿ ಭದ್ರತಾ ಪಡೆಗಳಿಂದ ಕಟ್ಟೆಚ್ಚರ - ಬಿಎಸ್​ಎಫ್​ನಿಂದ ಹದ್ದಿನ ಕಣ್ಣು

ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26 ರ ಮೊದಲು ಬಿಎಸ್ಎಫ್​ ಸಿಬ್ಬಂದಿಗೆ ಈ ರೀತಿಯ ಎಚ್ಚರಿಕೆಯನ್ನು ನೀಡಲಾಗುತ್ತದೆ. ಕಚ್‌ನ ಗಡಿಯಲ್ಲಿ ಭೂಮಿ ಮತ್ತು ಸಮುದ್ರ ಗಡಿಯಿಂದ ಭಯೋತ್ಪಾದಕರು ಮತ್ತು ಕಳ್ಳಸಾಗಾಣಿಕೆದಾರರು ಒಳನುಸುಳಿರುವ ಹಲವಾರು ಘಟನೆಗಳು ಈ ಹಿಂದೆ ನಡೆದಿವೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕಚ್‌ನಲ್ಲಿ ಹೈ ಅಲರ್ಟ್‌ :ಬಿಎಸ್​ಎಫ್​ನಿಂದ ಹದ್ದಿನ ಕಣ್ಣು
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕಚ್‌ನಲ್ಲಿ ಹೈ ಅಲರ್ಟ್‌ :ಬಿಎಸ್​ಎಫ್​ನಿಂದ ಹದ್ದಿನ ಕಣ್ಣು

By

Published : Jul 29, 2021, 6:18 PM IST

ಕಚ್ (ಗುಜರಾತ್):ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಉದ್ವಿಗ್ನತೆಯ ನಡುವೆ ಈಗ ಭಾರತ-ಪಾಕಿಸ್ತಾನ ಗಡಿಯಲ್ಲಿ ಹೈ ಅಲರ್ಟ್ ಹೊರಡಿಸಲಾಗಿದೆ. ಗುಜರಾತ್‌ನ ಕಚ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಕಟ್ಟೆಚ್ಚರ ವಹಿಸಲು ಗಡಿ ಭದ್ರತಾ ಪಡೆಗೆ (ಬಿಎಸ್‌ಎಫ್) ಸೂಚನೆ ನೀಡಲಾಗಿದೆ.

ಬಿಎಸ್​ಎಫ್​ನಿಂದ ಹದ್ದಿನ ಕಣ್ಣು

ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26 ರ ಮೊದಲು ಬಿಎಸ್ಎಫ್​ ಸಿಬ್ಬಂದಿಗೆ ಈ ರೀತಿಯ ಎಚ್ಚರಿಕೆಯನ್ನು ನೀಡಲಾಗುತ್ತದೆ. ಕಚ್‌ನ ಗಡಿಯಲ್ಲಿ ಭೂಮಿ ಮತ್ತು ಸಮುದ್ರ ಗಡಿಯಿಂದ ಭಯೋತ್ಪಾದಕರು ಮತ್ತು ಕಳ್ಳಸಾಗಾಣಿಕೆದಾರರು ಒಳನುಸುಳಿರುವ ಹಲವಾರು ಘಟನೆಗಳು ಈ ಹಿಂದೆ ನಡೆದಿವೆ. ಈ ಹಿನ್ನೆಲೆ ಬಿಎಸ್ಎಫ್, ಕೋಸ್ಟ್ ಗಾರ್ಡ್, ಮತ್ತು ಮೆರೈನ್ ಪೊಲೀಸ್​ ಈ ಪ್ರದೇಶದಲ್ಲಿ ನಿರಂತರವಾಗಿ ಗಸ್ತು ತಿರುಗುವುದನ್ನು ಮಾಡುತ್ತಿವೆ.

ಬಿಎಸ್​ಎಫ್​ನಿಂದ ಹದ್ದಿನ ಕಣ್ಣು

ಆಗಸ್ಟ್ 15 ರಂದು ಗುಜರಾತ್ ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಬಿಎಸ್‌ಎಫ್‌ನ ಇನ್ಸ್‌ಪೆಕ್ಟರ್ ಜನರಲ್ ಜಿಎಸ್ ಮಲಿಕ್ ಈಟಿವಿ ಭಾರತದ ಜೊತೆ ದೂರವಾಣಿ ಸಂಭಾಷಣೆಯಲ್ಲಿ ತಿಳಿಸಿದ್ದಾರೆ. ಪ್ರಧಾನ ಕಚೇರಿಯಲ್ಲಿ ಕನಿಷ್ಠ ಸಿಬ್ಬಂದಿ ಇರುತ್ತಾರೆ. ಉಳಿದ ಜವಾನರನ್ನು ಗಡಿಗೆ ಕಳುಹಿಸಲಾಗಿದೆ. ಕರಾವಳಿ ಪ್ರದೇಶ ಮತ್ತು ಭೂ ಗಡಿಯುದ್ದಕ್ಕೂ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details