ಶ್ರೀ ಗಂಗಾ ನಗರ (ರಾಜಸ್ಥಾನ): ಭಾರತ-ಪಾಕಿಸ್ತಾನ ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದ ಮೂವರು ಯುವಕರನ್ನು ಶಂಕೆಯ ಮೇಲೆ ಶನಿವಾರ ರಾತ್ರಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಂಧಿಸಿದ್ದಾರೆ. ಹರಿಯಾಣದ ನೋಂದಣಿಯ ಕಾರಿನಲ್ಲಿ ಮೂವರು ಆರೋಪಿಗಳು ಪಾನಮತ್ತರಾಗಿ ಪ್ರಯಾಣಿಸುತ್ತಿದ್ದರು. ಗಡಿಭದ್ರತಾ ಪಡೆಯು ಮೂವರನ್ನು ವಶಕ್ಕೆ ಪಡೆದು ಅವರಿಂದ 48,000 ನಗದು, ಐದು ಮೊಬೈಲ್ ಫೋನ್, ಇಂಟರ್ನೆಟ್ ಡಾಂಗಲ್ ಅನ್ನು ವಶಕ್ಕೆ ಪಡೆದಿದ್ದಾರೆ.
ಬಿಎಸ್‌ಎಫ್ ಗುಪ್ತಚರದ ಇನ್ಸ್‌ಪೆಕ್ಟರ್ ಆನಂದ್ ಕುಲು ಪ್ರಕಾರ: ಕಳೆದ ಕೆಲವು ದಿನಗಳಲ್ಲಿ ಹಲವು ಡ್ರೋನ್ ಚಲನವಲನಗಳು ದಾಖಲಾದ ಹಿನ್ನೆಲೆ ಶೋಧ ಕಾರ್ಯಾಚರಣೆ ಆರಂಭಿಸಿದ್ದೇವೆ. ಬಂಧಿತ ಕಳ್ಳಸಾಗಣೆದಾರರಲ್ಲಿ ಇಬ್ಬರು ಹರಿಯಾಣದ ನಿವಾಸಿ, ಅವರಲ್ಲಿ ಒಬ್ಬರು ಪಂಜಾಬ್ ಮೂಲದವರಾಗಿದ್ದಾರೆ. ಇವರೆಲ್ಲ ಗಡಿಯ ಇನ್ನೊಂದು ಬದಿಯಿಂದ ಎಸೆಯುವ ಹೆರಾಯಿನ್ ಪಾಕೆಟ್ಗಳನ್ನು ಸಂಗ್ರಹಿಸಲು ಗಡಿಯನ್ನು ತಲುಪಿದ್ದರು ಎಂದು ಶಂಕಿಸಲಾಗಿದೆ. ಮೂವರು ಕಳ್ಳಸಾಗಣೆದಾರರನ್ನು ಬಿಎಸ್ಎಫ್ ಪಡೆ ಪೊಲೀಸರಿಗೆ ಒಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್ಎಫ್ ಪಡೆ ಒಪ್ಪಿಸಿರುವ ಮೂವರು ಕಳ್ಳಸಾಗಣೆ ಶಂಕಿತ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಘಟನೆ ಸಂಬಂಧಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಮಾಹಿತಿಗಾಗಿ ತನಿಖೆ ಕೈಗೊಂಡಿದ್ದಾರೆ ಎಂದು ಠಾಣೆಯ ಮುಖ್ಯಸ್ಥ ಬಲವಂತ್ ರಾಮ್ ತಿಳಿಸಿದ್ದಾರೆ.
ಇದಕ್ಕೂ ಮುಂಚೆ 30 ಕೋಟಿ ಮೌಲ್ಯದ ಹೆರಾಯಿನ್ ವಶ:ಇದಕ್ಕೂ ಮುನ್ನ ಪಾಕಿಸ್ತಾನದಿಂದ ಬರುತ್ತಿದ್ದ ಡ್ರೋನ್‌ನಿಂದ 30 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಅನ್ನು ಬಿಎಸ್‌ಎಫ್ ಪಡೆ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಅಕ್ರಮ ಕಳ್ಳಸಾಗಣೆ ವಿವರಗಳನ್ನು ಬಹಿರಂಗಪಡಿಸಿದ ಬಿಎಸ್ಎಫ್ ಅಧಿಕಾರಿಗಳು, ಆಗಸ್ಟ್ 14 ರಂದು ಘಟನೆ ನಡೆದಿದೆ.