ಕರ್ನಾಟಕ

karnataka

ETV Bharat / bharat

ಅಂತಾರಾಷ್ಟ್ರೀಯ ಜಾನುವಾರು ಕಳ್ಳಸಾಗಾಣಿಕೆದಾರ ಬಿಎಸ್​ಎಫ್​ ಗುಂಡಿಗೆ ಬಲಿ - ಜಾನುವಾರು ಕಳ್ಳಸಾಗಾಣಿಕೆ ಆರೋಪಿ ಸಾವು

ತ್ರಿಪುರದ ಉತ್ತರ ಭಾಗಗಳಲ್ಲಿ ಜಾನುವಾರು ಸರಣಿ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬಪ್ಪಾ ಮಿಯಾನ್ ಎಂಬ ಬಾಂಗ್ಲಾದೇಶದ ಪ್ರಜೆಯನ್ನು ಬಿಎಸ್ಎಫ್ ಯೋಧರು ಗುಂಡಿಕ್ಕಿ ಕೊಂದಿದ್ದಾರೆ. ಶವವನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

BSF guns down cattle smuggler in Tripura
ಗುಂಡಿಕ್ಕಿ ಕೊಂದ ಬಿಎಸ್​ಎಫ್​

By

Published : Mar 21, 2021, 7:25 AM IST

ತ್ರಿಪುರ:ಉತ್ತರ ತ್ರಿಪುರ ಜಿಲ್ಲೆಯ ಕಡಮ್ತಲಾ ಪ್ರದೇಶದ ಯಾಕೂಬ್‌ನಗರ ಗಡಿಯಲ್ಲಿ ನಿಯೋಜನೆಗೊಂಡಿರುವ ಬಿಎಸ್​ಎಫ್​ ಯೋಧರು, ಜಿಲ್ಲೆಯ ಗಡಿ ಗ್ರಾಮವೊಂದರಲ್ಲಿ ಜಾನುವಾರು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾನೆಂದು ಹೇಳಲಾದ ಬಾಂಗ್ಲಾದೇಶದ ಪ್ರಜೆಯನ್ನು ಗುಂಡಿಕ್ಕಿ ಕೊಂದಿದ್ದಾರೆ.

ಮೃತ ಕಳ್ಳಸಾಗಾಣಿಕೆದಾರನನ್ನು ಬಾಪ್ಪಾ ಮಿಯಾ ಎಂದು ಗುರುತಿಸಲಾಗಿದ್ದು, ಈ ಹಿಂದೆ ಗಡಿಯಾಚೆಗಿನ ಕಳ್ಳಸಾಗಣೆ ಪ್ರಕರಣಗಳಲ್ಲಿ ಈತನ ವಿರುದ್ಧ ಕೇಸ್​​ ದಾಖಲಾಗಿತ್ತು.

ಯಾಕೂಬ್ ನಗರದ ಗಡಿಗಳಲ್ಲಿ ಜಾನುವಾರು ಕಳ್ಳಸಾಗಾಣಿಕೆದಾರರ ದೊಡ್ಡ ಗುಂಪು ಜಮಾಯಿಸಿರುವುದು ಶನಿವಾರ ಬಿಎಸ್ಎಫ್ ಪಡೆಯ ಗಮನಕ್ಕೆ ಬಂದಿದೆ. ಹತ್ತು ಹನ್ನೆರಡು ವ್ಯಕ್ತಿಗಳನ್ನೊಳಗೊಂಡ ಎರಡು ಗುಂಪುಗಳು ಭಾರತದ ಭೂಪ್ರದೇಶ ಮತ್ತು ಬಾಂಗ್ಲಾದೇಶ ಪ್ರದೇಶಗಳ ಎರಡೂ ಕಡೆಯಿಂದ ಗಡಿಗಳಲ್ಲಿ ಕಳ್ಳಸಾಗಾಣಿಕೆಂದು ಜಮಾಯಿಸಿದ್ದರು. ಅವರಲ್ಲಿ ಒಂದು ಗುಂಪು ಐಬಿಬಿ ಫೆನ್ಸಿಂಗ್ ಅನ್ನು ಕೀಳಲು ಪ್ರಾರಂಭಿಸಿದಾಗ, ಬಿಎಸ್ಎಫ್ ಪಡೆ ಅವರನ್ನು ಓಡಿಸಲು ಪ್ರಯತ್ನಿಸಿದೆ. ಆದರೆ ಕಳ್ಳಸಾಗಾಣಿಕೆದಾರರು ಸಾಕಷ್ಟು ಜಾನುವಾರುಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದರು ಹಾಗೂ ಅವರು ಯೋಧರ ಮೇಲೆ ಕಲ್ಲು ತೂರಲು ಆರಂಭಿಸಿದ್ದರು.

ನಂತರ ಸೈನಿಕರ ಸುತ್ತಲೂ ಮುತ್ತಿಗೆ ಹಾಕಿದರು. ಈ ವೇಳೆ ಆತ್ಮರಕ್ಷಣೆಗೆಂದು ಬಿಎಸ್​ಎಫ್​ ಯೋಧರು ಗುಂಡು ಹಾರಿಸಿದರು. ಈ ವೇಳೆ ಕಳ್ಳರ ಗುಂಪಿನ ಬಪ್ಪಾ ಮಿಯಾನ್​ಗೆ ಗುಂಡು ತಗುಲಿ ಸಾವನ್ನಪ್ಪಿದ್ದು, ಉಳಿದ ಕಳ್ಳಸಾಗಾಣಿಕೆದಾರು ತಪ್ಪಿಸಿಕೊಂಡು ಓಡಿ ಹೋದರು ಎಂದು ಬಿಎಸ್​ಎಫ್​ ಮಾಹಿತಿ ನೀಡಿದೆ. ಮೃತನ ಶವವನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.

ಇದನ್ನೂ ಓದಿ:ಇಂಗ್ಲೆಂಡ್​ ಮೇಲೆ ಭಾರತದ ಸವಾರಿ: 3-2 ಅಂತರದಿಂದ ಟಿ-20 ಸರಣಿ ಗೆದ್ದ ಕೊಹ್ಲಿ ಪಡೆ

ABOUT THE AUTHOR

...view details