ಕರ್ನಾಟಕ

karnataka

ETV Bharat / bharat

ಪಂಜಾಬ್: ಪಾಕ್‌ ಡ್ರೋನ್​​​ ಹೊಡೆದುರುಳಿಸಿದ ಬಿಎಸ್​ಎಫ್​, ಶಸ್ತ್ರಾಸ್ತ್ರ ವಶಕ್ಕೆ - ಈಟಿವಿ ಭಾರತ್​ ಕನ್ನಡ

ಪಾಕಿಸ್ತಾನದ ಡ್ರೋನ್​​ಗಳು ಪದೇ ಪದೇ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತದ ಒಳನುಗ್ಗುವ ವಿಫಲ ಯತ್ನಗಳನ್ನು ನಡೆಸುತ್ತಲೇ ಇವೆ.

ಪಂಜಾಬ್​ನ ಗುರುದಾಸ್​ಪುರದಲ್ಲಿ ಪಾಕಿಸ್ತಾನದ ಡ್ರೋಣ್​ ಅನ್ನು ಹೊಡೆದುರುಳಿಸಿದ ಬಿಎಸ್​ಎಫ್​ ಪಡೆ; ಶಸ್ತ್ರಾಸ್ತ್ರಗಳು ವಶಕ್ಕೆ
bsf-forces-shot-down-a-pakistani-drone-in-punjabs-gurdaspur

By

Published : Jan 18, 2023, 12:45 PM IST

ಗುರುದಾಸ್​ಪುರ್ (ಪಂಜಾಬ್)​:ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಯತ್ನಿಸಿದ ಪಾಕಿಸ್ತಾನದ ಡ್ರೋನ್​ ಹೊಡೆದುರುಳಿಸುವಲ್ಲಿ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಯಶಸ್ವಿಯಾಗಿದೆ. ಪಂಜಾಬ್​ನ ಗುರುದಾಸ್​ಪುರ್​ನದಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿರುವುದಾಗಿ ಬಿಎಸ್​ಎಫ್​ ಅಧಿಕಾರಿಗಳು ತಿಳಿಸಿದ್ದಾರೆ. ಚೀನಾ ನಿರ್ಮಿತ ಪಿಸ್ತೂಲ್‌ಗಳು ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಟ್ವೀಟ್​ ಮೂಲಕ ತಿಳಿಸಿರುವ ಬಿಎಸ್​ಎಫ್​​, 2023ರ ಜನವರಿ 17 ಮತ್ತು 18ರ ರಾತ್ರಿ ಗುರುದಾಸ್​ಪುರದ ಉಂಚ ತಕ್ಲಾ ಗ್ರಾಮದ ಹೊರವಲಯದಲ್ಲಿ ಬಿಎಸ್​ಎಫ್​ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಪಾಕಿಸ್ತಾನದ ಕಡೆಯಿಂದ ಸದ್ದು ಕೇಳಿಸಿದೆ. ಡ್ರೋನ್​​ ಸದ್ದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಬಿಎಸ್​ಎಫ್​ ಆ ದಿಕ್ಕಿನತ್ತ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯ ವೇಳೆ ಏನೋ ಒಂದು ವಸ್ತು ಈ ಪ್ರದೇಶದಲ್ಲಿ ಕೆಳಗೆ ಬಿದ್ದಿದೆ.

ವಸ್ತು ಬಿದ್ದ ಈ ಪ್ರದೇಶದಲ್ಲಿ ಹುಡುಕಾಟ ನಡೆಸಲಾಯಿತು. ಈ ಸಂದರ್ಭದಲ್ಲಿ ಉಂಚ ತಕ್ಲಾ ಗ್ರಾಮದಲ್ಲಿ ಕೆಲವು ಮರದ ಬಾಕ್ಸ್​ನಲ್ಲಿ ಪ್ಯಾಕೆಟ್​ಗಳು ಪತ್ತೆಯಾಗಿದೆ. ಪ್ಯಾಕೆಟ್​ ತೆರೆದಾಗ ಚೀನಾ ನಿರ್ಮಿತವಾದ 4 ಪಿಸ್ತೂಲ್​, 8 ಮ್ಯಾಗಜೀನ್​ ಮತ್ತು 47 ಗುಂಡುಗಳು ದೊರೆತಿದೆ ಎಂದು ಮಾಹಿತಿ ನೀಡಿದ್ದಾರೆ. ಭಾರತ-ಪಾಕಿಸ್ತಾನದ ಗಡಿಯ 3,323 ಕಿ.ಮೀ ಸುತ್ತ ಬಿಎಸ್​ಎಫ್​ ಗಸ್ತು ತಿರುಗುತ್ತಾರೆ. ಪಾಕಿಸ್ತಾನ ಆಗ್ಗಿದ್ದಾಂಗೆ ನಡೆಸುತ್ತಿರುವ ಕಳ್ಳಸಾಗಣೆ ದೃಷ್ಕೃತ್ಯವನ್ನು ವಿಫಲಗೊಳಿಸುವಲ್ಲಿ ಸೇನೆ​ ಯಶಸ್ವಿಯಾಗುತ್ತಿದೆ.

10 ದಿನದಲ್ಲಿ ಎರಡನೇ ದಾಳಿ​: ಡ್ರೋನ್​ ಮೂಲಕ ಪಾಕಿಸ್ತಾನ ಕಳ್ಳ ಸಾಗಣೆ ಯತ್ನ ನಡೆಸುತ್ತಿರುವ ಪ್ರಕರಣ ಕಳೆದ ಡಿಸೆಂಬರ್​ನಲ್ಲಿ ಕೂಡ ದಾಖಲಾಗಿತ್ತು. ಪಂಜಾಬ್​ನ ತರ್ನ್​ ತರಣ್​ ಜಿಲ್ಲೆಯ ಫಿರೋಜ್​ಪುರ್​ ವಲಯದಲ್ಲಿ ಹರ್ಭಜನ್​ ಗಡಿ ಪ್ರದೇಶದಲ್ಲಿ ಡ್ರೋಣ್​ ಅನ್ನು ಬಿಎಸ್​ಎಫ್​ ಹೊಡೆದುರುಳಿಸಿತ್ತು. 10 ದಿನಗಳ ಅಂತರದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಇದಕ್ಕೂ ಮುನ್ನ ಜ.8ರಂದು ಕೂಡ ಪಂಜಾಬ್​ ಪ್ರದೇಶದ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಡ್ರೋಣ್​ ಹಾರಾಟದ ಸದ್ದು ಕೇಳಿಸಿತ್ತು. ಬಿಎಸ್​ಎಫ್​ ಮತ್ತು ಪಂಜಾಬ್​ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಹೊಡೆದುರುಳಿಸಿದ್ದರು.

ಪಾಕಿಸ್ತಾನ ಮತ್ತು ಭಾರತದ ಅಂತಾರಾಷ್ಟ್ರೀಯ ಗಡಿಯ ಪಂಜಾಬ್‌ನಿಂದ ಭಾರತದ ಭೂಪ್ರದೇಶ ಪ್ರವೇಶಿಸಲು ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುವ ಪ್ರಯತ್ನವನ್ನು ಪಾಕ್‌ ಮಾಡುತ್ತಲೇ ಇದೆ. ಈಗಾಗಲೇ ಅನೇಕ ಬಾರಿ ಗಡಿಯಾಚೆಯಿಂದ ಡ್ರೋನ್‌ ಮೂಲಕ ಒಳನುಗ್ಗುವ ಪ್ರಯತ್ನಗಳನ್ನು ನಡೆಸಿದ್ದು, ಈ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ, ಗಡಿ ಪ್ರದೇಶಗಳಲ್ಲಿ ಬೀಡುಬಿಟ್ಟಿರುವ ಬಿಎಸ್‌ಎಫ್‌ ಇಂತಹ ಪ್ರಯತ್ನಗಳನ್ನು ವಿಫಲಗೊಳಿಸುತ್ತಿದೆ.

ಇದನ್ನೂ ಓದಿ:ಬಿಹಾರ​: ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಮಹಿಳೆ.. ಸ್ಥಿತಿ ಗಂಭೀರ

ABOUT THE AUTHOR

...view details