ಕರ್ನಾಟಕ

karnataka

ETV Bharat / bharat

ಒಳನುಸುಳಲು ಯತ್ನಿಸುತ್ತಿದ್ದ ಪಾಕ್​ ಕಳ್ಳಸಾಗಾಣಿಕೆದಾರರ ಮೇಲೆ ಫೈರಿಂಗ್: 25 ಕೆಜಿ ಹೆರಾಯಿನ್ ಜಪ್ತಿ - ಪಾಕಿಸ್ತಾನದ ಕಳ್ಳಸಾಗಾಣಿಕೆದಾರರ ಮೇಲೆ ಗುಂಡಿನ ದಾಳಿ

ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಕಳ್ಳಸಾಗಾಣಿಕೆದಾರರ ಮೇಲೆ ಬಿಎಸ್​ಎಫ್​ ಯೋಧರು ಗುಂಡಿನ ದಳಿ ನಡೆಸಿ, 25 ಕೆಜಿ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ.

bsf-foils-smuggling-bid-along-pak-border-in-punjab-recovers-25kg-heroin
ಒಳನುಸುಳಲು ಯತ್ನಿಸುತ್ತಿದ್ದ ಪಾಕ್​ ಕಳ್ಳಸಾಗಾಣಿಕೆದಾರರ ಮೇಲೆ ಫೈರಿಂಗ್: 25 ಕೆಜಿ ಹೆರಾಯಿನ್ ಜಪ್ತಿ

By

Published : Dec 21, 2022, 4:33 PM IST

ನವದೆಹಲಿ:ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಭರ್ಜರಿ ಕಾರ್ಯಾಚರಣೆ ನಡೆಸಿದೆ. ಗಡಿ ಒಳನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಕಳ್ಳಸಾಗಾಣಿಕೆದಾರರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಇದೇ ವೇಳೆ ಶೋಧ ಕಾರ್ಯಾಚರಣೆಯಲ್ಲಿ 25 ಕೆಜಿ ಹೆರಾಯಿನ್ ಜಪ್ತಿ ಮಾಡಲಾಗಿದೆ.

ಫಜಿಲ್ಕಾ ಜಿಲ್ಲೆಯ ಗಟ್ಟಿ ಅಜೈಬ್ ಸಿಂಗ್ ಗ್ರಾಮದ ಬಳಿ ಬುಧವಾರ ಬೆಳಗಿನ ಜಾವ 1.50ರ ಸುಮಾರಿಗೆ ಗಡಿ ಬೇಲಿಯ ಎರಡೂ ಬದಿಯಲ್ಲಿ ಯೋಧರು ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ್ದಾರೆ. ಅಂತೆಯೇ, ಯೋಧರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಈ ವೇಳೆ ದಟ್ಟವಾದ ಮಂಜಿನ ಹಿನ್ನೆಲೆಯಲ್ಲಿ ಕಳ್ಳಸಾಗಾಣಿಕೆದಾರರು ತಪ್ಪಿಸಿಕೊಳ್ಳುವಲ್ಲಿ ಯತ್ನಿಸಿದ್ದಾರೆ. ಆಗ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ.

ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪತ್ತೆಯಾದ ಹೆರಾಯಿನ್ ಮತ್ತು ಪಿವಿಸಿ ಪೈಪ್

ಇದೇ ವೇಳೆ ಶೋಧದ ವೇಳೆ ಬೇಲಿಯ ಎರಡೂ ಬದಿಯಲ್ಲಿ ಹಳದಿ ಟೇಪ್‌ನಲ್ಲಿ ಸುತ್ತಿದ ಶಂಕಿತ ಹೆರಾಯಿನ್‌ನ 4 ಪ್ಯಾಕೆಟ್‌ಗಳನ್ನು ಪತ್ತೆಯಾಗಿವೆ. ನಂತರ ಹೆಚ್ಚಿನ ಶೋಧ ಕಾರ್ಯ ನಡೆಸಿದ್ದು, ಆಗ ಅನುಮಾನಾಸ್ಪದ ವಸ್ತುವಿನ 21 ಪ್ಯಾಕೆಟ್‌ಗಳು, 12 ಅಡಿಯ ಪಿವಿಸಿ ಪೈಪ್ ಮತ್ತು ಶಾಲು ಪತ್ತೆಯಾಗಿದೆ. ಒಟ್ಟು 25 ಪ್ಯಾಕೆಟ್‌ಗಳಲ್ಲಿ ಸುಮಾರು 25 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ:ಟ್ರಕ್​ವೊಂದರಲ್ಲಿ 76 ಕೋಟಿ ರೂ. ಮೌಲ್ಯದ ಹೆರಾಯಿನ್​ ಪತ್ತೆ

ABOUT THE AUTHOR

...view details