ಅಮೃತಸರ: ಭಾರತದ ಭೂ ಪ್ರದೇಶ ಪ್ರವೇಶ ಮಾಡಿದ್ದ ಪಾಕಿಸ್ತಾನದ ಡ್ರೋನ್ ಮೇಲೆ ಶನಿವಾರ ಬೆಳಗ್ಗೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುಂಡಿನ ದಾಳಿ ನಡೆಸಿದೆ. ಆದರೂ ಪಾಕಿಸ್ತಾನ ಡ್ರೋನ್ ಮೂರು ಕೆಜಿ ಹೆರಾಯಿನ್ ಅನ್ನು ಭಾರತದ ಭೂ ಪ್ರದೇಶದಲ್ಲಿ ಬಿಟ್ಟು ವಾಪಸ್ ಹೋಗಿರುವ ಘಟನೆ ಪಂಜಾಬ್ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ.
ಬಿಎಸ್‌ಎಫ್ ಭದ್ರತಾ ಪಡೆ ಯೋಧರು ಡ್ರೋನ್ ಮೇಲೆ ತೀವ್ರ ಗುಂಡಿನ ದಾಳಿ ನಡೆಸಿದರೂ ಪಾಕಿಸ್ತಾನದ ಕಡೆಗೆ ಡ್ರೋನ್ ವಾಪಸ್ ಅಗುವಲ್ಲಿ ಯಶಸ್ವಿಯಾಗಿದೆ. ದೇಶದ ಗಡಿ ಉಲ್ಲಂಘಿಸಿ ಭಾರತದ ಭೂಪ್ರದೇಶಕ್ಕೆ ಡ್ರೋನ್ ಒಳನುಗ್ಗಿರುವುದನ್ನು ಅಮೃತಸರ ಸೆಕ್ಟರ್ನ ಬಿಎಸ್ಎಫ್ ಯೋಧರು ಶನಿವಾರ ಬೆಳಗ್ಗೆ ಪತ್ತೆ ಹಚ್ಚಿದ್ದರು ಎಂದು ಬಿಎಸ್ಎಫ್ವೂ ತನ್ನ ಟ್ವೀಟರ್ನಲ್ಲಿ ಬರೆದುಕೊಂಡಿದೆ.
ಬಿಎಸ್ಎಫ್ವೂ ಕ್ಷಣ ಕ್ಷಣಕ್ಕೂ ಪಾಕಿಸ್ಥಾನದಿಂದ ಬರುವ ಡ್ರೋನ್ ಮೇಲೆ ನಿಗಾ ಇಟ್ಟಿದೆ. ಆದರೆ ಶನಿವಾರ ಭಾರತ ಭೂ ಪ್ರದೇಶ ಪ್ರವೇಶಿಸಿದ ಪಾಕಿಸ್ತಾನದ ಡ್ರೋನ್ ಮೇಲೆ ಬಿಎಸ್ಎಫ್ ತೀವ್ರ ಗುಂಡಿನ ಮಳೆಗೆರದಿದೆ, ಆದರೂ ಕ್ಷಣದಲ್ಲಿ ಪಾಕಿಸ್ತಾನದ ಡ್ರೋನ್ ಬಚಾವ್ ಆಗಿದೆ. ಇಂಡೋ ಪಾಕ್ ಗಡಿ ಉಲ್ಲಂಘಿಸಿ ಭಾರತ ಭೂ ಪ್ರದೇಶ ಪ್ರವೇಶಿಸಿದ ಡ್ರೋನ್ ಕ್ಷಣ ಮಾತ್ರದಲ್ಲೇ ಪಾಕಿಸ್ತಾನಕ್ಕೆ ವಾಪಸ್ ಆಗುತ್ತಿದ್ದ ವೇಳೆ, 3 ಕೆಜಿ ತೂಕದ ಹೆರಾಯಿನ್‌ನ ಮೂರು ಪ್ಯಾಕೆಟ್‌ಗಳನ್ನು ಕೈಬಿಟ್ಟು ಹಿಂದಿರುಗಿದೆ.
ಕೆಲ ತಿಂಗಳಿಂದ ಪಾಕಿಸ್ತಾನ ಡ್ರೋನ್‌ಗಳು ಭಾರತ ಭೂ ಪ್ರವೇಶ: ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದ ಡ್ರೋನ್‌ಗಳು ಭಾರತದ ಭೂಪ್ರದೇಶಕ್ಕೆ ನುಗ್ಗುತ್ತಿರುವುದು ಹೆಚ್ಚಾಗಿದೆ. ಡ್ರಗ್ಸ್, ಶಸ್ತ್ರಾಸ್ತ್ರಗಳನ್ನು ಭಾರತದ ಭೂ ಪ್ರದೇಶಕ್ಕೆ ಪಾಕಿಸ್ತಾನ ಡ್ರೋನ್‌ಗಳು ತಂದು ಬಿಡುತ್ತಿರುವುದು ಪಂಜಾಬ್ ಗಡಿ ಜಿಲ್ಲೆಗಳಲ್ಲಿ ಆತಂಕ ಕಾಡುತ್ತಿದೆ.