ಕಚ್(ಗುಜರಾತ್): ಜಿಲ್ಲೆಯ ಗಡಿಯ ಸಮೀಪವಿರುವ ಹರಾಮಿ ನಲ್ಲಾದ ಮೂಲಕ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿದ್ದ ನಾಲ್ವರು ಪಾಕಿಸ್ತಾನದ ಮೀನುಗಾರರನ್ನು ಬಂಧಿಸಲಾಗಿದೆ. 10 ಪಾಕಿಸ್ತಾನದ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್ ತಿಳಿಸಿದೆ.
ಕಡಲ ಗಡಿಯಲ್ಲಿ ನುಗ್ಗುತ್ತಿದ್ದ ಪಾಕ್‌ನ ನಾಲ್ವರು, 10 ಬೋಟ್ ವಶಕ್ಕೆ ಪಡೆದ ಬಿಎಸ್‌ಎಫ್ - ಕಚ್ನಲ್ಲಿ 10 ಪಾಕಿಸ್ತಾನದ ದೋಣಿಗಳನ್ನು ವಶಪಡಿಸಿಕೊಂಡ ಬಿಎಸ್‌ಎಫ್ ಪಡೆ
ಗುರುವಾರ ಮುಂಜಾನೆ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್‌ಎಫ್) ಕಚ್ ಬಳಿಯ ಭಾರತ-ಪಾಕಿಸ್ತಾನ ಕಡಲ ಗಡಿಯಲ್ಲಿ ನಾಲ್ವರು ಪಾಕಿಸ್ತಾನದ ಮೀನುಗಾರರನ್ನು ಬಂಧಿಸಿದೆ.
ಬಿಎಸ್‌ಎಫ್ ಪಡೆ
BSF ಭುಜ್ ವಿಶೇಷ ತಂಡವು ಬಾರ್ಡರ್ ಪೋಸ್ಟ್ ಸಂಖ್ಯೆ 1165 ಮತ್ತು 1166 ನಡುವಿನ ಅನುಮಾನಾಸ್ಪದ ಚಲನೆ ಗಮನಿಸಿದೆ. ಈ ವೇಳೆ ಇಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಗುರುತಿಸಿದ ಬಿಎಸ್‌ಎಫ್ ಈ ಪ್ರದೇಶವನ್ನು ಸುತ್ತುವರೆದಿದೆ. ಬಳಿಕ ಪಾಕ್‌ನ ಮೀನುಗಾರರು ಮತ್ತು ದೋಣಿಗಳನ್ನು ವಶಕ್ಕೆ ಪಡೆದರು.
ಓದಿ:ಭಾರತ ಗಡಿ ಪ್ರವೇಶಿಸಿದ ಪಾಕಿಸ್ತಾನದ ಮಗುವನ್ನು ಕುಟುಂಬಸ್ಥರಿಗೆ ಮರಳಿಸಿದ ಯೋಧರು