ಹೈದರಾಬಾದ್ :ಇಬ್ಬರು ಯುವಕರು ಬಂಗಾರದ ಪದಕ ತಯಾರಿಸಿ ಕೊಡುವುದಾಗಿ ಹೇಳಿ ವಂಚಿಸಿದಕ್ಕೆ ಗ್ರಾಹಕರು ಅವರನ್ನು ಸಿಲಿಂಡರ್‌ಗೆ ಕಟ್ಟಿ ಮನಸೋ ಇಚ್ಛೆ ಥಳಿಸಿರುವ ಘಟನೆ ಇಲ್ಲಿನ ಚಾರ್ಮಿನಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಿಲಿಂಡರ್‌ಗೆ ಕಟ್ಟಿ ಮನಸೋ ಇಚ್ಛೆ ಥಳಿಸಿದ ಗ್ರಾಹಕರು ಇಲ್ಲಿನ ಚೆಲಾಪುರ ಪ್ರದೇಶದ ಕೆಲವು ಬಂಗಾಳಿಗಳು ಆರ್ಡರ್ಗಳನ್ನು ತೆಗೆದುಕೊಂಡು ಚಿನ್ನಾಭರಣದ ಪದಕಗಳನ್ನು ತಯಾರಿಸುತ್ತಾರೆ. ಇಬ್ಬರು ತಯಾರಕರಿಗೆ ಗ್ರಾಹಕರು ಚಿನ್ನದ ಆಭರಣವನ್ನು ಮಾಡುವಂತೆ ಆರ್ಡರ್ ಕೊಟ್ಟಿದ್ದಾರೆ.
ಆಭರಣ ತಯಾರಿಕೆಯಲ್ಲಿ ಗುಣಮಟ್ಟವನ್ನು ಅನುಸರಿಸದೆ ಕಳಪೆ ಮಟ್ಟಣದಲ್ಲಿ ಚಿನ್ನದ ಆಭರಣವನ್ನು ತಯಾರಿಸಿ ಕೊಟ್ಟಿದ್ದಾರೆ. ಈ ವಿಷಯ ಗ್ರಾಹಕರಿಗೆ ತಿಳಿದಿದ್ದು, ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದು ತಿಳಿದಿದ್ದಾರೆ. ಈ ಘಟನೆ ಕುರಿತು ಪೊಲೀಸರಿಗೆ ದೂರು ನೀಡದೆ ಗ್ರಾಹಕರು ಕಾನೂನನ್ನು ಕೈಗೆ ತೆಗೆದುಕೊಂಡರು.
ಗ್ರಾಹಕರು ಆ ಇಬ್ಬರನ್ನು ಸಿಲಿಂಡರ್‌ಗೆ ಕಟ್ಟಿ ಮನಸೋಇಚ್ಛೆ ಥಳಿಸಿದ್ದಾರೆ. ಅಷ್ಟೇ ಅಲ್ಲ, ಚಪ್ಪಲಿ, ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಸಂತ್ರಸ್ತರು ಎಷ್ಟೇ ಕೇಳಿಕೊಂಡರು ಸಹ ಗ್ರಾಹಕರ ಮನಸ್ಸು ಕರಗದೇ ಮನಬಂದಂತೆ ಥಳಿಸುತ್ತಲೇ ಇದ್ದರು. ಈ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.