ಗಾಜಿಯಾಬಾದ್: ನಾಯಿಯೊಂದನ್ನು ಕಬ್ಬಿಣದ ಸರಪಳಿಯಿಂದ ನೇಣು ಹಾಕಿರುವುದು ಮಾತ್ರವಲ್ಲದೆ, ಇಬ್ಬರು ಯುವಕರು ನಾಯಿಯ ಕೊರಳಿಗೆ ಹಗ್ಗವನ್ನು ಕಟ್ಟಿ ಎರಡೂ ಕಡೆಯಿಂದ ಎಳೆಯುತ್ತಿರುವ ಅತ್ಯಂತ ಹೇಯ ದುಷ್ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಂಥ ಕ್ರೌರ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗಾಜಿಯಾಬಾದ್ ಜನರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಲೋನಿ ಪೊಲೀಸ್ ಠಾಣೆ ವ್ಯಾಪ್ತಿಯ ಎಲೈಚಿಪುರ್ನಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ದೃಶ್ಯದಲ್ಲಿ ಮೂವರು ವ್ಯಕ್ತಿಗಳು ಕಾಣಿಸಿಕೊಂಡಿದ್ದಾರೆ. ಈ ಪೈಕಿ ಇಬ್ಬರು ನಾಯಿಯ ಕುತ್ತಿಗೆಗೆ ಹಗ್ಗದಿಂದ ಬಿಗಿದರೆ ಇನ್ನೊಬ್ಬ ಪಕ್ಕದಲ್ಲೇ ನಿಂತು ನೋಡುತ್ತಿದ್ದಾನೆ. ನಾಯಿಯನ್ನು ಈ ರೀತಿ ಕೊಂದಿರುವುದಕ್ಕೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ.