ಹೈದರಾಬಾದ್:2024ರ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಬಿಆರ್‌ಎಸ್ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ದಲಿತ ಬಂಧು ಯೋಜನೆ ಜಾರಿಗೊಳಿಸಲಾಗುವುದು. 2021ರಲ್ಲಿ ಪ್ರಾರಂಭವಾದ ಯೋಜನೆಯು ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಉದ್ಯಮ ಪ್ರಾರಂಭಿಸಲು ಅನುದಾನವಾಗಿ 10 ಲಕ್ಷ ರೂ. ನೇರ ಲಾಭ ವರ್ಗಾವಣೆ ಯೋಜನೆಯಡಿ ನೀಡಿದೆ. ಈ ಹಣವನ್ನು ಮರುಪಾವತಿಸಬೇಕಿಲ್ಲ ಎಂದು ಪ್ರಕಟಿಸಿದರು.
ನಗರದ ಹೃದಯಭಾಗವಾದ ಹುಸೇನ್ಸಾಗರ್ನಲ್ಲಿ ಸ್ಥಾಪಿಸಲಾಗಿರುವ ಬಿ.ಆರ್.ಅಂಬೇಡ್ಕರ್ ಅವರ ಬೃಹತ್ 125 ಅಡಿ ಎತ್ತರದ ಪ್ರತಿಮೆಯನ್ನು ಇಂದು ಅನಾವರಣಗೊಳಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಕೆಸಿಆರ್ ಮಾತನಾಡಿದರು. ಬಿಆರ್‌ಎಸ್ ಪಕ್ಷಕ್ಕೆ ಮಹಾರಾಷ್ಟ್ರದಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶದಿಂದಲೂ ಇದೇ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ :ಸಾಲ ಪಡೆಯುವಲ್ಲಿ ಅಸ್ಸೋಂ ಸರ್ಕಾರದ ದಾಖಲೆ: ಇಂದು ಅಸ್ಸೋಂಗೆ ಪ್ರಧಾನಿ ಮೋದಿ ಭೇಟಿ