ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್‌ಗೆ ಅಧಿಕಾರ ನೀಡಿದರೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ: ಪ್ರಿಯಾಂಕಾ ವಾದ್ರಾ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ತೆಲಂಗಾಣದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

BRS government is not in a position to care about people's problems: Priyanka Gandhi
BRS government is not in a position to care about people's problems: Priyanka Gandhi

By ETV Bharat Karnataka Team

Published : Nov 27, 2023, 8:17 PM IST

Updated : Nov 27, 2023, 8:30 PM IST

ತೆಲಂಗಾಣ:ಹತ್ತು ವರ್ಷಗಳ ಆಡಳಿತವನ್ನು ನೋಡಿದ ಜನತೆ ಮುಂದಿನ ಐದು ವರ್ಷಗಳ ಕಾಲ ಯಾವ ರೀತಿಯ ಸರ್ಕಾರ ಬೇಕು ಎಂಬುದನ್ನು ಆಯ್ಕೆ ಮಾಡುವ ಸಮಯ ಬಂದಿದೆ. ಮತದಾನ ಮಾಡುವ ಮುನ್ನ ಜನರು ಒಮ್ಮೆ ಯೋಚಿಸಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಸಲಹೆ ನೀಡಿದರು.

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜಸ್ಥಾನ ಮತ್ತು ಕರ್ನಾಟಕದಲ್ಲಿ ಜಾರಿಗೆ ತರಲಾಗಿರುವ ಯೋಜನೆಗಳನ್ನು ತೆಲಂಗಾಣದಲ್ಲಿಯೂ ಜಾರಿಗೊಳಿಸುವುದಾಗಿ ಭರವಸೆ ನೀಡಿದರು. ಬಿಆರ್‌ಎಸ್ ಸರ್ಕಾರಕ್ಕೆ ಜನರ ಸಮಸ್ಯೆಗಳ ಬಗ್ಗೆ ತಿಳಿವಳಿಕೆ ಇಲ್ಲ. ಕಷ್ಟದಲ್ಲಿರುವವರಿಗೆ ಹೇಗೆ ಸಹಾಯ ಮಾಡಬೇಕು ಎಂಬ ಕಲ್ಪನೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದ ಪ್ರಿಯಾಂಕಾ, ದೇಶದಲ್ಲಿ ನೋಟು ಅಮಾನ್ಯೀಕರಣ, ಕೊರೊನಾ ಮತ್ತು ಜಿಎಸ್‌ಟಿಯಿಂದ ಜನರು ಅನೇಕ ತೊಂದರೆ ಅನುಭವಿಸಿದ್ದಾರೆ ಎಂದರು.

ಕಷ್ಟದ ಸಮಯದಲ್ಲಿ ಈ ಸರ್ಕಾರ ನಿಮಗೆ ಬೆಂಬಲ ನೀಡಿಲ್ಲ. ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ಪ್ರತಿದಿನ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಈ ಸರ್ಕಾರವು ಜನರ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆಯೂ ಕಾಳಜಿ ವಹಿಸುವ ಸ್ಥಿತಿಯಲ್ಲಿಲ್ಲ. ರೈತರನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಆತ್ಮಹತ್ಯೆಗಳಂತಹ ಪ್ರಕರಣ ಹೆಚ್ಚಾಗಿವೆ ಎಂದು ತೆಲಂಗಾಣದ ಕೆ. ಚಂದ್ರಶೇಖರ್ ರಾವ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ತೆಲಂಗಾಣಕ್ಕಾಗಿ ಹೋರಾಡಿದ ಯುವಕರಿಗೆ ರಾಜ್ಯದಲ್ಲಿ ಈವರೆಗೂ ನ್ಯಾಯ ಸಿಕ್ಕಿಲ್ಲ. ಕಷ್ಟಪಟ್ಟು ಪರೀಕ್ಷೆ ಬರೆದರೆ ಪತ್ರಿಕೆಗಳು ಸೋರಿಕೆಯಾಗಿ ಯುವಕರ ಬದುಕು ಹಾಳಾಗಿದೆ. ತೆಲಂಗಾಣ ರಾಜ್ಯ ರಚನೆಯಾದರೆ ಭವಿಷ್ಯ ಉತ್ತಮವಾಗುತ್ತದೆ ಎಂದು ನಂಬಿದ್ದರು. ಆದರೆ, ಅದು ಸುಳ್ಳಾಗಿದೆ. ರಾಜ್ಯ ಸರ್ಕಾರದ ಆಡಳಿತದಲ್ಲಿ ಕೆಳಹಂತದಿಂದ ಉನ್ನತ ಮಟ್ಟದವರೆಗೆ ಎಲ್ಲವೂ ಭ್ರಷ್ಟಮಯವಾಗಿದೆ. ರಾಜ್ಯದಲ್ಲಿ ಬಿಆರ್‌ಎಸ್‌ನ ಪ್ರತಿನಿಧಿಗಳೇ ಶ್ರೀಮಂತರಾಗಿದ್ದು ಬಡವರು ಬಡವರಾಗಿಯೇ ಇದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ತೆಲಂಗಾಣ ಜನತೆ ತಾವು ತಮ್ಮ ಕನಸನ್ನು ಈಡೇರಿಸಿಕೊಳ್ಳಬಹುದು ಎಂದು ಅವರು ಹೇಳಿದರು. ಇದೇ ವೇಳೆ, ಕಾಂಗ್ರೆಸ್ ಘೋಷಿಸಿದ ಆರು ಭರವಸೆಗಳನ್ನು ಜನರಿಗೆ ವಿವರಿಸಿದರು. ಅಧಿಕಾರಕ್ಕೆ ಬಂದ ಕೂಡಲೇ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಜಾರಿಗೊಳಿಸುವುದಾಗಿಯೂ ಅವರು ಭರವಸೆ ನೀಡಿದರು.

ನವೆಂಬರ್​ 30 ರಂದು ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಏಕಕಾಲದಲ್ಲಿ ಮತದಾನ ನಡೆಯಲಿದೆ. ನಾಳೆ ಬಹಿರಂಗ ಚುನಾವಣಾ ಪ್ರಚಾರ ಕೊನೆಗೊಳ್ಳಲಿದೆ. ಹೀಗಾಗಿ ಕಾಂಗ್ರೆಸ್​ ನಾಯಕರ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ. 30 ರಂದು ತೆಲಂಗಾಣ ಮತದಾರರು ಎಲ್ಲ ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ.

ಇದನ್ನೂ ಓದಿ:ಬಿಆರ್​ಎಸ್​ ಮುಳುಗುತ್ತಿರುವ ಹಡಗು ಎನ್ನುವುದು ಕೆಸಿಆರ್​ಗೆ ಅರ್ಥವಾಗಿದೆ: ಪ್ರಧಾನಿ ಮೋದಿ ಟಾಂಗ್​

Last Updated : Nov 27, 2023, 8:30 PM IST

ABOUT THE AUTHOR

...view details