ಕರ್ತಾರ್‌ಪುರ (ಪಾಕಿಸ್ತಾನ):1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಇಬ್ಬರು ಸಹೋದರರು 74 ವರ್ಷಗಳ ನಂತರ ಪಾಕಿಸ್ತಾನದ ಕರ್ತಾರ್‌ಪುರದಲ್ಲಿ ಮತ್ತೆ ಒಂದಾಗಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ಸಂಪರ್ಕಿಸುವ ಕರ್ತಾರ್‌ಪುರ ಕಾರಿಡಾರ್ ಮೂಲಕ ಭಾರತದ ಪಂಜಾಬ್‌ನ ಫುಲ್ಲನ್‌ವಾಲ್ ಪ್ರದೇಶದಿಂದ ಹಬೀಬ್ ಎಂಬವರು ಬಂದಿದ್ದು, ಅಲ್ಲಿ ಅವರ ಕಿರಿಯ ಸಹೋದರ ಮೊಹಮ್ಮದ್ ಸಿದ್ದಿಕ್ ಅವರನ್ನು (80) ಭೇಟಿಯಾಗಿದ್ದಾರೆ. ಸಿದ್ದಿಕ್ ಪ್ರಸ್ತುತ ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.
74 ವರ್ಷದ ಬಳಿಕ ಒಂದಾದ ಅಣ್ಣ ತಮ್ಮ ವಿಭಜನೆಯ ಸಮಯದಲ್ಲಿ ಇವರ ಕುಟುಂಬ ಇಬ್ಭಾಗವಾಗಿದ್ದು, ಆಗ ಸಿದ್ದಿಕ್ ಮಗುವಾಗಿದ್ದರು. ಇದೀಗ ಏಳು ದಶಕಗಳ ಬಳಿಕ ವೃದ್ಧ ಸಹೋದರರು ಒಂದಾಗಿದ್ದು, ಪರಸ್ಪರ ಅಪ್ಪಿಕೊಂಡು ಕಣ್ಣೀರು ಸುರಿಸಿದ ಈ ಭಾವನಾತ್ಮಕ ಘಳಿಗೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ಮುಂದೆ ಕರ್ತಾರ್‌ಪುರ ಕಾರಿಡಾರ್ ಮೂಲಕ ಬಂದು ಭೇಟಿಯಾಗುವುದಾಗಿ ಅಣ್ಣ ಹಬೀಬ್ ತಮ್ಮನಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಶೀಲ್ಡ್ ಲಸಿಕೆ ಮಾಡಿದ ಜಾದು: ಮಾತು ನಿಂತು ಹೋಗಿದ್ದ ವ್ಯಕ್ತಿಗೆ ಬಂತು ಮಾತು!
ಭಾರತದಿಂದ ಪಾಕಿಸ್ತಾನದ ಕರ್ತಾಪುರದವರೆಗೆ ವೀಸಾ - ಮುಕ್ತ ಪ್ರಯಾಣಕ್ಕೆ ಅನುಕೂಲವಾಗುವಂತೆ ಕರ್ತಾರ್‌ಪುರ ಕಾರಿಡಾರ್ ಅನ್ನು ತೆರೆದಿದ್ದಕ್ಕಾಗಿ ಇಬ್ಬರು ಸಹೋದರರು ಉಭಯ ದೇಶಗಳ ಸರ್ಕಾರಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.