ಕರ್ನಾಟಕ

karnataka

ETV Bharat / bharat

ಮರ್ಯಾದೆ ಹತ್ಯೆ ಶಂಕೆ: ಯುವಕನಿಗೆ ಚಾಕುವಿನಿಂದ ಇರಿದು ಕೊಂದ ಭಾವಂದಿರು! - ಮಧ್ಯಪ್ರದೇಶದಲ್ಲಿ ಯುವಕನ ಕೊಲೆ

ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

Honor killing
ಮರ್ಯಾದೆ ಹತ್ಯೆ ಶಂಕೆ

By

Published : Mar 1, 2021, 12:03 PM IST

ಇಂದೋರ್: ಇಲ್ಲಿನ ರಾಜೀವ್ ಬಜಾರ್ ಪ್ರದೇಶದಲ್ಲಿ ಸಂಬಂಧಿಗಳು ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಇದು ಮರ್ಯಾದೆ ಹತ್ಯೆ ಎಂದು ಶಂಕಿಸಲಾಗಿದೆ.

ಸಮೀರ್ ಎಂಬಾತ ಕೊಲೆಯಾದ ವ್ಯಕ್ತಿ. ಮೊಹಮ್ಮದ್ ಅಯಾಜ್ ಹಾಗೂ ಮೊಹಮ್ಮದ್ ವಾಕರ್ ಆರೋಪಿಗಳೆಂದು ಗುರುತಿಸಲಾಗಿದೆ.

ಅಯಾಜ್ ಮತ್ತು ವಾಕರ್​ನ ಸಹೋದರಿ ಅಲ್ಮಾಸ್ ಎಂಬಾಕೆ ಸಮೀರ್ ಜೊತೆ ಓಡಿ ಹೋಗಿ ಮದುವೆಯಾಗಿದ್ದರು. ಬಾಲಕಿಯ ಕುಟುಂಬದಲ್ಲಿ ತೀವ್ರ ವಿರೋಧದ ನಡುವೆಯೂ ಇವರು ಎರಡು ತಿಂಗಳ ಹಿಂದೆ ಮದುವೆಯಾಗಿದ್ದರು.

ಇನ್ನು ಇದೇ ಭಾನುವಾರ ಮಧ್ಯಾಹ್ನದಂದು ಅಯಾಜ್ ಮತ್ತು ವಾಕರ್, ಅಲ್ಮಾಸ್ ಮತ್ತು ಸಮೀರ್​ನನ್ನು ಊಟಕ್ಕೆ ಆಹ್ವಾನಿಸಿದರು. ಕುಟುಂಬಗಳ ನಡುವಿನ ಸಂಬಂಧಗಳು ಸರಿಹೋಗುತ್ತವೆ ಎಂದು ನಂಬಿದ ದಂಪತಿ ಊಟಕ್ಕೆ ತೆರಳಿದ್ದಾರೆ. ಆದರೆ ಇಲ್ಲಿ ಸಮೀರ್​ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಘಟನೆ ಬಗ್ಗೆ ಮಾತನಾಡಿದ ಇಂದೋರ್ ಪೊಲೀಸ್ ಆಯುಕ್ತ ದಿಶೇಶ್ ಅಗರ್ವಾಲ್, "ಸಮೀರ್ ಖಾನ್ ದೇವಾಸ್ ನಿವಾಸಿಯಾಗಿದ್ದಾರೆ. ಭಾನುವಾರ ಸಂಜೆ 5.30 ಕ್ಕೆ ಸಮೀರ್ ತನ್ನ ಪತ್ನಿ ಅಲ್ಮಾಸ್ ಜೊತೆ ತನ್ನ ಸೋದರ ಮಾವನ ಮನೆಗೆ ಹೋಗಿದ್ದಾನೆ. ಈ ವೇಳೆ, ಆತನನ್ನು ಇಬ್ಬರು ಆರೋಪಿಗಳು ಮೋತಿ ತಬೆಲಾ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ" ಎಂದು ಹೇಳಿದರು.

ABOUT THE AUTHOR

...view details