ಗಂಜಾಂ( ಒಡಿಶಾ):ಜಿಲ್ಲೆಯಲ್ಲಿ ಮನಕಲುಕುವಂತಹ ಘಟನೆಯೊಂದು ನಡೆದಿದೆ. ವಿಷ ಆಹಾರ ಸೇವಿಸಿದ ಬಳಿಕ ತಾಯಿ ಮತ್ತು ಆಕೆಯ ಮಕ್ಕಳಿಬ್ಬರು ಅಸ್ವಸ್ಥಗೊಂಡಿದ್ದಾರೆ. ಬಳಿಕ ಆಕೆಯ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ತಾಯಿ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ರಂಭಾ ಪೊಲೀಸ್ ಠಾಣಾ ವ್ಯಾಪ್ತಿಯ ಗಡಗುಮಾ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ: ರಾಮಕೃಷ್ಣ ಮಹಾರಾಣಾ ಅವರ ಪತ್ನಿ ಮತ್ತು 2 ವರ್ಷದ ಮಗ ರುದ್ರ ಹಾಗೂ 4 ವರ್ಷದ ಮಗಳು ಸಿಮ್ರಾನ್ ನಿನ್ನೆ ಹಾಲು ಸೇವಿಸಿದ್ದಾರೆ. ಹಾಲು ಸೇವಿಸಿದ ಕೆಲ ಹೊತ್ತಿನ ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರೆಲ್ಲರನ್ನೂ ಚಿಕಿತ್ಸೆಗಾಗಿ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆ ಕಂಡ ನಂತರ ತಾಯಿ, ಮಕ್ಕಳನ್ನು ಸಂಜೆ ಡಿಸ್ಚಾರ್ಜ್ ಮಾಡಲಾಯಿತು.