ಕರ್ನಾಟಕ

karnataka

ETV Bharat / bharat

ತಂಗಿಯನ್ನೇ ಗರ್ಭವತಿ ಮಾಡಿದ ಅಣ್ಣ: ಪ್ರಕರಣದಲ್ಲಿ ಇಬ್ಬರೂ ಅಪ್ರಾಪ್ತರು! - ಸ್ವಂತ ತಂಗಿಯ ಮೇಲೆ ಅಪ್ರಾಪ್ತ ಬಾಲಕ ಅತ್ಯಾಚಾರ

ಬಾಲಕಿ ಆಗಾಗ ಹೊಟ್ಟೆನೋವು ಎಂದು ಸಂಕಟ ಪಡುತ್ತಿದ್ದಳು. ಇದನ್ನು ಕಂಡು ತಾಯಿ ವಿಚಾರಿಸಿದಾಗ, ಅಣ್ಣ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾಳೆ. ಕೂಡಲೇ ಬಾಲಕಿಯ ತಾಯಿ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾಳೆ.

brother raped his sister in tirupati case booked
ಸ್ವಂತ ತಂಗಿಯನ್ನೇ ಗರ್ಭವತಿ ಮಾಡಿದ ಅಪ್ರಾಪ್ತ ಬಾಲಕ

By

Published : Jul 4, 2021, 5:05 PM IST

ತಿರುಪತಿ​: ಸ್ವಂತ ತಂಗಿಯ ಮೇಲೆ ಅಣ್ಣನೊಬ್ಬ ನಿರಂತರ ಅತ್ಯಾಚಾರವೆಸಗಿ, ಗರ್ಭವತಿಯನ್ನಾಗಿಸಿದ ಘಟನೆ ತಿರುಪತಿ ಅಲಿಪಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಅಣ್ಣ-ತಂಗಿ ಇಬ್ಬರೂ ಅಪ್ರಾಪ್ತರೇ ಆಗಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕ ತನ್ನ ತಂಗಿಯನ್ನು ಹೆದರಿಸಿ ಬಲವಂತವಾಗಿ ಪದೇ ಪದೇ ಅತ್ಯಾಚಾರ ಎಸಗುತ್ತಿದ್ದನಂತೆ. ಪರಿಣಾಮ ಬಾಲಕಿ ಗರ್ಭವತಿಯಾಗಿದ್ದಾಳೆ.

ಇಲ್ಲಿನ ಉಪನಗರ ಕಾಲೋನಿಯ ವ್ಯಕ್ತಿಯೊಬ್ಬ 20 ವರ್ಷಗಳ ಹಿಂದೆ ಮದುವೆಯಾಗಿದ್ದ. ಈತನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕುಟುಂಬ ಕಲಹದ ಹಿನ್ನೆಲೆಯಲ್ಲಿ ಆಕೆ ಗಂಡನನ್ನು ತೊರೆದು ಮನೆ ಬಿಟ್ಟು ಹೋಗಿದ್ದಳಂತೆ. ನಂತರ ಈ ವ್ಯಕ್ತಿ ಇನ್ನೊಂದು ಮದುವೆಯಾಗಿದ್ದು, ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಕಳೆದ ಆರು ತಿಂಗಳಿಂದ ಮೊದಲ ಹೆಂಡತಿಯ ಮಗ 16 ವಯಸ್ಸಿನ ಬಾಲಕ, ತನ್ನ ತಂದೆಯ ಎರಡನೇ ಹೆಂಡತಿ (ಚಿಕ್ಕಮ್ಮ)ನ ಮನೆಗೆ ಆಗಾಗ ಬಂದು ಹೋಗುತ್ತಿದ್ದನಂತೆ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ 14 ವರ್ಷದ ತನ್ನ ತಂಗಿಯ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿಯೂ ಆತ ಬೆದರಿಕೆ ಹಾಕಿರುವ ವಿಚಾರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಆದರೆ ಕೆಲವು ದಿನಗಳ ನಂತರ ಬಾಲಕಿ ಆಗಾಗ ಹೊಟ್ಟೆನೋವು ಎಂದು ಸಂಕಟ ಪಡುತ್ತಿದ್ದಳು. ಇದನ್ನು ಕಂಡು ತಾಯಿ ವಿಚಾರಿಸಿದಾಗ, ಅಣ್ಣ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾಳೆ. ಕೂಡಲೇ ಬಾಲಕಿಯ ತಾಯಿ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾಳೆ.

ಇದನ್ನೂ ಓದಿ : ನಡುರಸ್ತೆಯಲ್ಲೇ ಕೊಚ್ಚಿ ಕೊಲೆ: ಬೆಚ್ಚಿ ಬೀಳಿಸುವಂತಿದೆ ಸಿಸಿಟಿವಿ ವಿಡಿಯೋ

ಈ ಕೃತ್ಯ ಎಸಗಿದ ಬಾಲಕನ ವಿರುದ್ಧ ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details