ಬೊಕಾರೊ (ಜಾರ್ಖಂಡ್): ಕೊಲೆ ಪ್ರಕರಣದಲ್ಲಿ ಶಿಕ್ಷಣ ಸಚಿವ ಜಗರ್ನಾಥ್ ಮಹ್ತೋ ಅವರ ಸಹೋದರ ಬೈಜ್ನಾಥ್ ಮಹ್ತೋ ಸೇರಿದಂತೆ ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಪ್ರೀತಿ ವಿಚಾರಕ್ಕೆ ಥಳಿಸಿ ಕೊಲೆ : ಶಿಕ್ಷಣ ಸಚಿವರ ಸೋದರನಿಗೆ ಜೀವಾವಧಿ ಶಿಕ್ಷೆ - ಕೊಲೆ ಪ್ರಕರಣದಲ್ಲಿ ಶಿಕ್ಷಣ ಸಚಿವ ಜಗರ್ನಾಥ್ ಮಹ್ತೋ
ಪ್ರೀತಿಸಿದ ಹುಡುಗಿಯ ಜೊತೆ ಓಡಿಹೋದ ಕಾರಣಕ್ಕೆ ಸಂತೋಷ್ ಪಾಂಡೆ ಎಂಬುವರನ್ನು ಇವರೆಲ್ಲರೂ ಕ್ರೂರವಾಗಿ ಥಳಿಸಿದ್ದರು. ಈ ಹಿನ್ನೆಲೆ ನ್ಯಾಯಾಲಯ ಸರಿಯಾದ ಶಿಕ್ಷೆ ವಿಧಿಸಿದೆ.
ಶಿಕ್ಷಣ ಸಚಿವರ ಸೋದರನಿಗೆ ಜೀವಾವಧಿ ಶಿಕ್ಷೆ
ಮಾರ್ಚ್ 2014 ರಲ್ಲಿ ಪಾಂಡೆ ಎಂಬುವರನ್ನು ಮಾರಣಾಂತಿಕವಾಗಿ ಥಳಿಸಲಾಗಿತ್ತು. ಈ ಪ್ರಕರಣದಲ್ಲಿ 10 ಜನ ಆರೋಪಿಗಳಿದ್ದರು. ಆದರೆ, ಮೂವರನ್ನು ಸಾಕ್ಷ್ಯಾಧಾರದ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ಇನ್ನುಳಿದ ಬೈಜ್ನಾಥ್ ಮಹ್ತೋ ಗಣೇಶ ಭಾರತಿ, ನೇಮಿ ಪುರಿ, ಕೈಲಾಶ್ ಪುರಿ, ಜಿತೇಂದ್ರ ಪುರಿ, ನೀರಜ್ ಪುರಿ ಅವರಿಗೆ 2021 ರ ಜನವರಿ 4 ರಂದು ನ್ಯಾಯಾಲಯವು ಶಿಕ್ಷೆ ವಿಧಿಸಿದೆ.
ಪ್ರೀತಿಸಿದ ಹುಡುಗಿಯ ಜೊತೆ ಓಡಿಹೋದ ಕಾರಣಕ್ಕೆ ಸಂತೋಷ್ ಪಾಂಡೆ ಎಂಬುವರನ್ನು ಇವರೆಲ್ಲರೂ ಕ್ರೂರವಾಗಿ ಥಳಿಸಿ ಕೊಲೆ ಮಾಡಿದ್ದರು.