ಭಾಗಲ್ಪುರ(ಬಿಹಾರ) :ಸಹೋದರ ಮತ್ತು ಸಹೋದರಿ ಸಂಬಂಧ ಪವಿತ್ರ. ಆದ್ರೆ, ಬಿಹಾರದಲ್ಲಿ ನಡೆದ ಈ ಒಂದು ಘಟನೆ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿದೆ.
ಬಿಹಾರದ ನಾಥ್‌ನಗರ ಪೊಲೀಸ್ ಠಾಣೆಯ ಮಧುಸೂದನ್‌ಪುರದ ಮಣಿಯರ್‌ಪುರ ಗ್ರಾಮದಲ್ಲಿ ಒಬ್ಬ ಸಹೋದರ ತನ್ನ ತಂಗಿಯನ್ನೇ ವಿವಾಹವಾಗುವ ಮೂಲಕ ಇಡೀ ಕುಟುಂಬವೇ ತಲೆತಗ್ಗಿಸಿದೆ. ಅಷ್ಟೇ ಅಲ್ಲ, ವಿವಾಹಿತ ಸಹೋದರಿಯನ್ನು ಪ್ರೀತಿಸಿದ ಸಹೋದರನಿಗೆ ಆಕೆಯ ಅತ್ತೆ ಮನೆಯವರೇ ಮದುವೆ ಮಾಡಿಸಿದ್ದಾರೆ.
ನಡೆದಿದ್ದಿಷ್ಟು ..
ಕಜ್ರೈಲಿ ಪೊಲೀಸ್ ಠಾಣೆಯ ಗಡ್ಡಿ ಬಹದ್ದೂರ್ಪುರ್ ಗ್ರಾಮದ ಯುವತಿಗೆ 9 ದಿನಗಳ ಹಿಂದೆ ಮಧುಸೂದನ್ಪುರದ ಬೆಲ್ಖೋರಿಯಾ ಮಣಿಯಾರ್ಪುರದಲ್ಲಿ ವಿವಾಹವಾಯಿತು. ಮದುವೆಯ ಬಳಿಕ ಹುಡುಗಿ ಲೋಕನಿಯಾಳನ್ನು ಒಡಹುಟ್ಟಿದವರು ಭೇಟಿಯಾಗಲು ಬಂದಿದ್ದಾರೆ.
ಆದ್ರೆ, ಈ ಸಂದರ್ಭ ಅವರೀರ್ವರು ಒಂದೇ ಕೋಣೆಯಲ್ಲಿ ಬಂಧಿಯಾದರು. ಈ ಸಂದರ್ಭ ಕುಟುಂಬ ಸದಸ್ಯರಿಗೆ ಅನುಮಾನ ಬಂದಿದೆ. ಬಳಿಕ ಅವರು ಕೋಣೆಯ ರಂಧ್ರದ ಮೂಲಕ ಇಣುಕಿ ನೋಡಿದಾಗ ಅವರಿಬ್ಬರೂ ಆಕ್ಷೇಪಾರ್ಹ ಸ್ಥಿತಿಯಲ್ಲಿರುವುದು ಕಂಡು ವಿಚಲಿತರಾಗಿದ್ದಾರೆ. ಆ ಸಂದರ್ಭದ ಕೆಲವು ಚಿತ್ರಗಳನ್ನು ಸಹ ತೆಗೆದುಕೊಳ್ಳಲಾಗಿದೆ.
ಬಳಿಕ ಬಾಗಿಲು ತೆರೆದು ಈ ಕುರಿತು ಪ್ರಶ್ನಿಸಿದ್ದಾರೆ. ಅವರನ್ನು ಹಳ್ಳಿಗೆ ಕರೆದೊಯ್ಯಬೇಕೆಂದು ಹೇಳಿದಾಗ ಇಬ್ಬರೂ ಭಯಭೀತರಾಗಿದ್ದಾರೆ. ಹುಡುಗಿಯ ಅತ್ತೆ ಮನೆಯವರು ಆಕೆಯ ಸಹೋದರನಿಗೆ ಅವಳಿಗೆ ಸಿಂಧೂರ ಹಚ್ಚಲು ಷರತ್ತು ವಿಧಿಸಿದರು.
ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಜಮಾಯಿಸಿದ್ದರು. ಪ್ರೀತಿ ಇದ್ದರೆ ಅವರೇ ಮದುವೆಯಾಗಬಹುದಿತ್ತು. ಆದರೆ, ಯಾಕೆ ಬೇರೆ ಮದುವೆಯಾಗಬೇಕಾಗಿತ್ತು ಎಂದು ಅಲ್ಲಿ ನೆರೆದಿದ್ದವರ ಪ್ರಶ್ನೆಯಾಗಿತ್ತು. ಈ ಘಟನೆಯ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.