ಕರ್ನಾಟಕ

karnataka

ETV Bharat / bharat

ಎತ್ತುಗಳಿಲ್ಲದೇ 10 ವರ್ಷದಿಂದ ತಾವೇ ಉಳುಮೆ ಮಾಡುತ್ತಿದ್ದಾರೆ ಈ ಅಣ್ಣ-ತಂಗಿಯರು!!

ಜಿಲ್ಲೆಯ ಅಷ್ಟ ತಹಸಿಲ್‌ನ ನಾನಕ್‌ಪುರದ ರೈತ ಸಾಗರ್ ಕುಶ್ವಾಹ 10 ವರ್ಷಗಳ ಹಿಂದೆ ನಿಧನರಾಗಿದ್ದರು. ಮೃತನಿಗೆ ಪತ್ನಿ ಮತ್ತು ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ..

ಎತ್ತುಗಳಿಲ್ಲದೇ 10 ವರ್ಷದಿಂದ ತಾವೇ ಉಳುಮೆ ಮಾಡುತ್ತಿದ್ದಾರೆ ಈ ಅಣ್ಣ-ತಂಗಿಯರು
ಎತ್ತುಗಳಿಲ್ಲದೇ 10 ವರ್ಷದಿಂದ ತಾವೇ ಉಳುಮೆ ಮಾಡುತ್ತಿದ್ದಾರೆ ಈ ಅಣ್ಣ-ತಂಗಿಯರು

By

Published : Jun 19, 2021, 5:11 PM IST

ಮಧ್ಯಪ್ರದೇಶ: ಸಿಎಂ ಶಿವರಾಜ್ ಸಿಂಗ್ ಚೌಹಾಣ್​ ತವರು ಜಿಲ್ಲೆ ಸೆಹೋರ್‌ನಲ್ಲಿ ಮನೆಯಲ್ಲಿ ಎತ್ತುಗಳು ಇಲ್ಲದ ಕಾರಣ, ಅಣ್ಣ ಮತ್ತು ತಂಗಿಯರಿಬ್ಬರು ಒಟ್ಟಿಗೆ ಹೊಲವನ್ನು ಉಳುಮೆ ಮಾಡುತ್ತಿದ್ದಾರೆ. ಎತ್ತುಗಳು ಇಲ್ಲದಿರುವ ಕಾರಣ ನೇಗಿಲನ್ನು ಎಳೆದು ಉಳುಮೆ ಮಾಡಲು ಅಣ್ಣನಿಗೆ ಸಾಥ್​ ನೀಡಿರುವ ಈ ಮನಕಲಕುವ ಸಂಗತಿ ಬೆಳಕಿಗೆ ಬಂದಿದೆ.

ಎತ್ತುಗಳಿಲ್ಲದೇ 10 ವರ್ಷದಿಂದ ತಾವೇ ಉಳುಮೆ ಮಾಡುತ್ತಿದ್ದಾರೆ ಈ ಅಣ್ಣ-ತಂಗಿಯರು..

ಜಿಲ್ಲೆಯ ಅಷ್ಟ ತಹಸಿಲ್‌ನ ನಾನಕ್‌ಪುರದ ರೈತ ಸಾಗರ್ ಕುಶ್ವಾಹ 10 ವರ್ಷಗಳ ಹಿಂದೆ ನಿಧನರಾಗಿದ್ದರು. ಮೃತನಿಗೆ ಪತ್ನಿ ಮತ್ತು ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಇದರಿಂದಾಗಿ ಕುಟುಂಬಕ್ಕೆ ಎತ್ತುಗಳನ್ನು ಖರೀದಿಸಲು ಹಣವಿಲ್ಲದ ಕಾರಣ ಹೊಲವನ್ನು ಇವರೇ ಉಳುಮೆ ಮಾಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶೈಲೇಂದ್ರ ಕುಶ್ವಾಹ, ನನ್ನ ತಂದೆಯ ಮೃತಪಟ್ಟು ಹತ್ತು ವರ್ಷ ಕಳೆದಿದೆ. ಅಂದಿನಿಂದ ಕುಟುಂಬವನ್ನು ಪೋಷಿಸುವ ಜವಾಬ್ದಾರಿ ನನ್ನ ಮೇಲೆ ಬಿದ್ದಿದೆ. ತಾಯಿ ಉರ್ಮಿಳಾ ಕುಶ್ವಾಹ ಕೂಲಿ ಕೆಲಸ ಮಾಡುತ್ತಾರೆ. 4 ಎಕರೆ ಭೂಮಿ ಇದೆ, ಅದರಲ್ಲಿ ಅವನು ಸೋಯಾಬೀನ್ ಕೃಷಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾನೆ.

ಓದಿ:ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಜ್ಞರ ನೇಮಕ; ಜೂನ್‌ 30ರೊಳಗೆ ವರದಿ ಸಲ್ಲಿಕೆ

For All Latest Updates

ABOUT THE AUTHOR

...view details