ಕರ್ನಾಟಕ

karnataka

By

Published : Apr 29, 2021, 9:10 AM IST

ETV Bharat / bharat

ಭಾರತ-ಚೀನಾ ಗಡಿ ರಸ್ತೆ ಯೋಜನೆಯ ಕಮಾಂಡರ್​ ಆಗಿ ಮಹಿಳಾಧಿಕಾರಿ ನೇಮಕ

ರಸ್ತೆ ನಿರ್ಮಾಣ​ ಕಂಪನಿಗೆ ಸೂಕ್ತ ನಿರ್ದೇಶನ​ ನೀಡಲು ಬಾರ್ಡರ್​ ರೋಡ್​ ಆರ್ಗನೈಝೇಷನ್​ (ಬಿಆರ್‌ಒ) ಮಹಾರಾಷ್ಟ್ರದ ವಾರ್ಧಾದ ವೈಶಾಲಿ ಎಸ್. ಹಿವಾಸೆ ಎಂಬ ಮಹಿಳಾಧಿಕಾರಿಯನ್ನು ನೇಮಕ ಮಾಡಿದೆ.

BRO
ವೈಶಾಲಿ ಎಸ್. ಹಿವಾಸೆ

ನವದೆಹಲಿ: ಭಾರತ-ಚೀನಾ ಗಡಿಯುದ್ದಕ್ಕೂ ಎತ್ತರದ ಪ್ರದೇಶದಲ್ಲಿ ರಸ್ತೆ ಸಂಪರ್ಕ ಒದಗಿಸುವ ಕಾರ್ಯವನ್ನು ರೋಡ್​ ಕನ್​ಸ್ಟ್ರಕ್ಷನ್​ ಕಂಪನಿ (ಆರ್‌ಸಿಸಿ)ಗೆ ವಹಿಸಲಾಗಿದೆ. ಇದರ ಕಾರ್ಯಕ್ಕೆ ನಿರ್ದೇಶನ ನೀಡಲು ಬಾರ್ಡರ್​ ರೋಡ್​ ಆರ್ಗನೈಝೇಷನ್​ (ಬಿಆರ್‌ಒ) ಮಹಿಳಾ ಅಧಿಕಾರಿಯನ್ನು ನೇಮಿಸಿದೆ.

ಮಹಾರಾಷ್ಟ್ರದ ವಾರ್ಧಾದ ವೈಶಾಲಿ ಎಸ್. ಹಿವಾಸೆಯನ್ನು ನೇಮಕ ಮಾಡಲಾಗಿದೆ. ಎಂಟೆಕ್ ಪದವಿ ಪಡೆದಿರುವ ವೈಶಾಲಿ ಈಗಾಗಲೇ ಕಾಶ್ಮೀರದ ಕಾರ್ಗಿಲ್‌ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ: ಒಂದೇ ದಿನ 1.33 ಕೋಟಿ ಮಂದಿ ನೋಂದಣಿ

"ಇದು ಬಿಆರ್​ಒನ ಒಂದು ವಿಶೇಷ ಆರಂಭವಾಗಿದೆ. ಇದು ಮಹಿಳಾ ಸಬಲೀಕರಣದ ಹೊಸ ಯುಗವನ್ನು ಹುಟ್ಟುಹಾಕುತ್ತದೆ. ಈ ಮೂಲಕ ಮಹಿಳಾ ಅಧಿಕಾರಿಗಳು ಅತ್ಯಂತ ಕಠಿಣ ಕಾರ್ಯಗಳನ್ನು ಸಹ ಮಾಡಬಲ್ಲರು ಎಂಬುದನ್ನು ತೋರಿಸುತ್ತದೆ" ಎಂದು ಬಿಆರ್​ಒನ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details