ಕರ್ನಾಟಕ

karnataka

ETV Bharat / bharat

ಚೆನ್ನೈ 'ಬಿರಿಯಾನಿ'... ಸತತ 6ನೇ ವರ್ಷವು ಭಾರತದ ನೆಚ್ಚಿನ ಖಾದ್ಯಗಳಲ್ಲಿ ಮೊದಲ ಸ್ಥಾನ! - ಚೆನ್ನೈ ಫೇಮಸ್​ ಬಿರಿಯಾನಿ

ಚೆನ್ನೈನಲ್ಲಿ ತಯಾರಾಗುವ ಬಿರಿಯಾನಿ ಸತತ 6ನೇ ವರ್ಷವೂ ಭಾರತದ ನೆಚ್ಚಿನ ಖಾದ್ಯಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

India Favourite Food Briyani
India Favourite Food Briyani

By

Published : Dec 27, 2021, 7:30 PM IST

ಚೆನ್ನೈ(ತಮಿಳುನಾಡು): ಬಿರಿಯಾನಿ ಎಂದಾಕ್ಷಣ ನೆನಪಾಗೊಂದು ಹೈದರಾಬಾದ್​​ ಬಿರಿಯಾನಿ. ಆದರೆ, ಚೆನ್ನೈನಲ್ಲಿ ಸಿಗುವ ವಿಶೇಷ ಬಿರಿಯಾನಿವೊಂದು ಸತತ 6ನೇ ವರ್ಷವೂ ಭಾರತದ ನೆಚ್ಚಿನ ಖಾದ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಹೌದು, ಚೆನ್ನೈನಲ್ಲಿ ಅನೇಕ ಬಗೆಯ ಖಾದ್ಯಗಳು ಸಿಗುತ್ತವೆ. ಅದರಲ್ಲೂ ಚಿಕನ್​, ಮಟನ್​, ಸೀಗಡಿ ಸೇರಿದಂತೆ ಹಲವು ಬಗೆಯ ಬಿರಿಯಾನಿಗಳು ನೆಚ್ಚಿನ ಖಾದ್ಯಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿವೆ. ಇದರಲ್ಲಿ ಹೆಚ್ಚಿನವರು ಬಾಸುಮತಿ ರೈಸ್​​ ಮತ್ತು ಸೀರಗ ಸಾಂಬಾ ಅಕ್ಕಿಯಿಂದ ತಯಾರುಗೊಳ್ಳುವ ಬಿರಿಯಾನಿ ಇಷ್ಟಪಡುತ್ತಾರೆ. ಖಾಸಗಿ ಆಹಾರ ವಿತರಣಾ ಕಂಪನಿ(ಸ್ವಿಗ್ಗಿ) ಬಿಡುಗಡೆ ಮಾಡಿರುವ ಅಧ್ಯಯನವೊಂದರ ಪ್ರಕಾರ 2021ರಲ್ಲಿ ಚೆನ್ನೈನಲ್ಲಿ ನಿಮಿಷಕ್ಕೆ 115 ಬಿರಿಯಾನಿ ಸೇಲ್(ಸೆಕೆಂಡ್​ಗೆ 2 ಬಿರಿಯಾನಿ)​ ಆಗಿವೆ ಎಂದು ತಿಳಿಸಿದೆ.

ಚೆನ್ನೈನಲ್ಲಿ ತಯಾರಾಗುವ ವಿಶೇಷ ಬಿರಿಯಾನಿ

2021ರಲ್ಲಿ ಸ್ವಿಗ್ಗಿ ಕಂಪನಿಯಿಂದ 4.25 ಲಕ್ಷ ಹೊಸ ಗ್ರಾಹಕರು ಚಿಕನ್​ ಬಿರಿಯಾನಿ ಆರ್ಡರ್​ ಮಾಡಿದ್ದು, ಒಟ್ಟು 6,04,44,000 ಜನರಿಗೆ ಬಿರಿಯಾರಿ ವಿತರಣೆ ಮಾಡಲಾಗಿದೆ ಎಂದು ತಿಳಿಸಿದೆ. ಕಳೆದ ಆರು ವರ್ಷಗಳಿಂದಲೂ ಬಿರಿಯಾನಿ ಮಾರಾಟವಾಗುವುದರಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂದಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿರಿಯಾನಿ ಅಂಗಡಿ ಮಾಲೀಕ, ಟೇಸ್ಟ್​​​​ನಿಂದಾಗಿ ಜನರು ಹೆಚ್ಚಾಗಿ ಬಿರಿಯಾನಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ಹಾಕುವ ಕೆಲವೊಂದು ಪದಾರ್ಥಗಳು ಮನಸ್ಸಿಗೆ ಮುದ ನೀಡುತ್ತವೆ. ಹೀಗಾಗಿ ಹೆಚ್ಚಿನ ಜನರು ಇದರಿಂದ ಆಕರ್ಷಣೆಗೊಳಪಡುತ್ತಾರೆ ಎಂದಿದ್ದಾರೆ.

ಇದನ್ನೂ ಓದಿರಿ:ಗ್ರಾಹಕರಿಗೆ ಗುಡ್​ನ್ಯೂಸ್ ​: ಅಡುಗೆ ಎಣ್ಣೆ ಬೆಲೆಯಲ್ಲಿ ಶೇ.15ರವರೆಗೆ ಇಳಿಕೆ

ಹಬ್ಬ-ಹರಿದಿನಗಳಲ್ಲಿ ಹೆಚ್ಚಾಗಿ ಜನರು ಬಿರಿಯಾನಿ ಆರ್ಡರ್​ ಮಾಡ್ತಾರೆ. ಇದರ ಮೇಲಿನ ಪ್ರೀತಿಯಿಂದಾಗಿ ಚೆನ್ನೈನ ಪ್ರತಿ ಬೀದಿಯಲ್ಲೂ ಬಿರಿಯಾನಿ ಶಾಪ್​ ಓಪನ್​ ಆಗಿವೆ ಎಂದು ಅಧ್ಯಯನದಲ್ಲಿ ತಿಳಿಸಿದೆ. ಚೆನ್ನೈನಲ್ಲೇ ಸಾವಿರಕ್ಕೂ ಅಧಿಕ ಬಿರಿಯಾನಿ ಅಂಗಡಿಗಳಿದ್ದು, ಬೇರೆ ನಗರಗಳಲ್ಲೂ ಇದೇ ಪರಿಸ್ಥಿತಿ ಇದೆ ಎನ್ನಲಾಗಿದೆ.

ABOUT THE AUTHOR

...view details