ದಿಯೋಘರ್(ಜಾರ್ಖಂಡ್):ಪ್ರೀತಿ-ಪ್ರೇಮಕ್ಕೆ ಯಾವುದೇ ಜಾತಿ-ಧರ್ಮ, ಗಡಿ, ಭಾಷೆಯ ಮಿತಿಯಿಲ್ಲ. ಯಾರ ಮೇಲೆ ಯಾರಿಗೆ ಬೇಕಾದ್ರೂ ಲವ್ ಆಗಬಹುದು. ಅಂತಹ ಅನೇಕ ಉದಾಹರಣೆಗಳು ಈಗಾಗಲೇ ನಡೆದು ಹೋಗಿವೆ. ಸದ್ಯ ಲಂಡನ್ ಯುವಕನೋರ್ವ ಜಾರ್ಖಂಡ್ ಯುವತಿಯ ಕೈ ಹಿಡಿದಿದ್ದಾರೆ. ಹಿಂದೂ ದೇವಸ್ಥಾನದಲ್ಲಿ ಇಬ್ಬರ ಮದುವೆ ಕಾರ್ಯಕ್ರಮ ನಡೆದಿದೆ.
ಇದನ್ನೂ ಓದಿ:ಸುಟ್ಟ ಸ್ಥಿತಿಯಲ್ಲಿ ಯುವತಿಯ ಅರೆಬೆತ್ತಲೆ ಮೃತದೇಹ ಕಾಡಿನಲ್ಲಿ ಪತ್ತೆ
ಲಂಡನ್ನಲ್ಲಿ ವೈದ್ಯನಾಗಿರುವ ಸ್ಯಾಮ್ ಅಲ್ಲಿನ ಟೆಲಿಕಾಂ ಕಂಪನಿವೊಂದರಲ್ಲಿ ಕೆಲಸ ಮಾಡ್ತಿರುವ ಗಾಜಿಯಾಬಾದ್ನ ಯುವತಿ ಜೈನಾ ಜೊತೆ ಪರಿಚಯವಾಗಿದೆ. ಇದಾದ ಬಳಿಕ ಇಬ್ಬರ ನಡುವೆ ಸ್ನೇಹ, ತದನಂತರ ಪ್ರೀತಿ ಚಿಗುರಿದೆ. ಇದರ ಬೆನ್ನಲ್ಲೇ ಎರಡು ಕುಟುಂಬ ಇವರ ಪ್ರೀತಿಗೆ ಒಪ್ಪಿಕೊಂಡಿದ್ದು, ಇದೀಗ ಭಾರತೀಯ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ.
ಅಂಗ್ರೇಜಿ ವರನೊಂದಿಗೆ ಸಪ್ತಪದಿ ತುಳಿದ ಯುವತಿ ತಾನು ಇಷ್ಟಪಟ್ಟ ಯುವತಿಯ ಕೈಹಿಡಿಯಲು ಸ್ಯಾಮ್ ಕುಟುಂಬದೊಂದಿಗೆ ಬ್ರಿಟನ್ನಿಂದ ಭಾರತಕ್ಕೆ ಬಂದಿದ್ದುಮ, ಇದೀಗ ಜಾರ್ಖಂಡ್ನ ದೇವಘರ್ ಬಾಬಾ ದೇವಸ್ಥಾನದಲ್ಲಿ ಮ್ಯಾರೇಜ್ ಮಾಡಿಕೊಂಡಿದ್ದಾರೆ.