ಕರ್ನಾಟಕ

karnataka

ETV Bharat / bharat

ಬ್ರಿಟಿಷ್​​ ರಾಜತಾಂತ್ರಿಕರಿಗೆ ಚಂಡೀಗಢದಲ್ಲಿ ಲೈಂಗಿಕ ಕಿರುಕುಳ.. ಪ್ರಕರಣ ದಾಖಲು - ಚಂಡೀಗಢದಲ್ಲಿ ಲೈಂಗಿಕ ಕಿರುಕುಳ

ಬ್ರಿಟಿಷ್​ ರಾಜತಾಂತ್ರಿಕರಿಗೆ ಚಂಡೀಗಢದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

British Diplomat
British Diplomat

By

Published : Oct 7, 2021, 6:35 PM IST

ಚಂಡೀಗಢ(ಹರಿಯಾಣ): 60 ವರ್ಷದ ಮಹಿಳಾ ಬ್ರಿಟಿಷ್​ ರಾಜತಾಂತ್ರಿಕ(British Diplomat)ರಿಗೆ ಚಂಡೀಗಢದಲ್ಲಿ ಬೈಕ್​ ಸವಾರನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

60 ವರ್ಷದ ಬ್ರಿಟಿಷ್​​ ಡಿಪ್ಲೊಮ್ಯಾಟ್​​​ ಚಂಡೀಗಢದ ಸೆಕ್ಟರ್ ​​​-10ರಲ್ಲಿ ಕಿರುಕುಳಕ್ಕೊಳಗಾಗಿದ್ದು, ಟೆನಿಸ್​​ ಆಡಲು ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಳಗಿನ ಜಾವ 6 ಗಂಟೆಗೆ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಚಂಡೀಗಢದಲ್ಲಿರುವ ಬ್ರಿಟಿಷ್​ ಡೆಪ್ಯುಟಿ ಹೈಕಮಿಷನ್​ಗೆ ಮೊದಲು ಮಾಹಿತಿ ನೀಡಿದ್ದಾರೆ.

ದೂರಿನ ಪ್ರಕಾರ, ಸೆಕ್ಟರ್​​​-10ರ ಡಿಎವಿ ಕಾಲೇಜ್​ ಬಳಿ ಇರುವ ಲಾನ್​​ ಟೆನಿಸ್​​ ಅಸೋಸಿಯೇಷನ್​ ಕಡೆಗೆ ತೆರಳುತ್ತಿದ್ದಾಗ ಬೈಕ್​ನಲ್ಲಿ ಬಂದ ಸವಾರನೊಬ್ಬ ಕಿರುಕುಳ ನೀಡಿದ್ದು, ಬೆನ್ನಿಗೆ ಹೊಡೆದಿದ್ದಾನೆಂದು ತಿಳಿಸಿದ್ದಾರೆ. ಈ ವೇಳೆ ಕೂಗಿಕೊಳ್ಳಲು ಆರಂಭಿಸಿದ್ದರಿಂದ ಸ್ಥಳದಿಂದ ಆತ ಪರಾರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 354-A ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿರಿ:ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಂಗನಾ ಸ್ಪರ್ಧೆ ವದಂತಿ.. ಪೊಲೀಸ್ ಠಾಣೆ ಮೆಟ್ಟಿಲೇರಿದ ಕಮಲ

ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾರನ್ನೂ ಬಂಧನ ಮಾಡಿಲ್ಲ. ಆರೋಪಿಗಳ ಪತ್ತೆಗಾಗಿ ಪೊಲೀಸರು ಪ್ರದೇಶದಲ್ಲಿ ಅಳವಡಿಕೆ ಮಾಡಿರುವ CCTV ದೃಶ್ಯಾವಳಿ ಪರಿಶೀಲನೆ ಮಾಡ್ತಿದ್ದಾರೆ.

ABOUT THE AUTHOR

...view details