ಮುಂಬೈ: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಬಿಕ್ಕಟ್ಟು ನಿವಾರಣೆಗಾಗಿ ದೆಹಲಿಗೆ ಆಮ್ಲಜನಕ ಸಿಲಿಂಡರ್‌ಗಳು ಮತ್ತು ಸಾಂದ್ರಕಗಳು ಸೇರಿದಂತೆ ತುರ್ತು ಆರೋಗ್ಯ ಪರಿಕರಗಳನ್ನು ಹೊತ್ತ ಬೋಯಿಂಗ್ 777-200 ಬ್ರಿಟಿಷ್ ಏರ್‌ವೇಸ್ ವಿಮಾನ ಭಾರತ ತಲುಪಿದೆ.
ಆಮ್ಲಜನಕ ಸಿಲಿಂಡರ್, ಸಾಂದ್ರಕಗಳನ್ನು ಹೊತ್ತು ತಂದ ಬ್ರಿಟಿಷ್ ಏರ್‌ವೇಸ್ ವಿಮಾನ
ಕೊರೊನಾ ಸಂಕಷ್ಟದ ಕಾಲದಲ್ಲಿ ಭಾರತದ ನೆರವಿಗೆ ನಿಂತಿರುವ ಪ್ರಪಂಚದ ನಾನಾ ದೇಶಗಳು ಆಮ್ಲಜನಕ ಸಿಲಿಂಡರ್‌ಗಳು ಮತ್ತು ಸಾಂದ್ರಕಗಳನ್ನು ಕಳುಹಿಸಿಕೊಡುತ್ತಿವೆ. ಈಗ ತುರ್ತು ಆರೋಗ್ಯ ಪರಿಕರಗಳನ್ನು ಹೊತ್ತ ಬೋಯಿಂಗ್ 777 - 200 ಬ್ರಿಟಿಷ್ ಏರ್‌ವೇಸ್ ವಿಮಾನ ಭಾರತ ತಲುಪಿದೆ.
ಜನರ ಜೀವನದ ಮೇಲೆ ಪರಿಣಾಮ ಬೀರುವ ಕೊರೊನಾ ಸೋಂಕಿನ ವಿರುದ್ಧ ಬಲಿಷ್ಠವಾಗಿ ಹೊರಡಲು ನಾವು ಭಾರತದೊಂದಿಗೆ ಸದಾ ಇರುತ್ತೇವೆ ಎಂದು ಬ್ರಿಟಿಷ್ ಸರ್ಕಾರ ಹೇಳಿದೆ. ಸಾರಿಗೆ ಸಹಾಯಕ್ಕೆ ಸಹಾಯ ಮಾಡುವ ಸ್ಥಿತಿಯಲ್ಲಿರುವುದು ನಮ್ಮ ಅದೃಷ್ಟ ಮತ್ತು ಅದಕ್ಕಾಗಿ ನಾನು ತುಂಬಾ ಹೆಮ್ಮೆ ಪಡುತ್ತೇನೆ. ವಿಮಾನಯಾನ ಮತ್ತು ಐಎಜಿ ಕಾರ್ಗೋದ ಸ್ವಯಂ ಸೇವಕರು ಈ ಕೆಲಸ ಮಾಡಲು ಮುಂದಾಗಿದ್ದಾರೆ ಎಂದು ಬ್ರಿಟಿಷ್ ಏರವೇಸ್ ಸಿಇಒ ಸೀನ್ ಡಾಯ್ಲ್ ಹೇಳಿದ್ದಾರೆ.
ಬ್ರಿಟಿಷ್ ಏರವೇಸ್ ಸೇರಿದಂತೆ ಕಾರ್ಪೊರೇಟ್ ವಲಯದ ಪಾಲುದಾರರ ಅದ್ಭುತ ಬೆಂಬಲದೊಂದಿಗೆ, ವಿಪತ್ತುಗಳಿಗೆ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು 14 ಪ್ರಮುಖ ಯುಕೆಯ ಸಂಸ್ಥೆಗಳು ಮುಂದೆ ಬಂದಿವೆ ಎಂದು ಡಿಇಸಿಯ ಸಿಇಒ ಸಲೇಹ್ ಸಯೀದ್ ಹೇಳಿದ್ದಾರೆ.