ಬ್ರಿಟನ್:ಭಾರತದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಈ ನಡುವೆ ಭಾರತಕ್ಕೆ ಕೊರೊನಾ ವ್ಯಾಕ್ಸಿನ್ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್ ತಿಳಿಸಿದ್ದಾರೆ.
'ಬ್ರಿಟನ್ ಭಾರತಕ್ಕೆ ಈಗಾಗಲೇ ವೆಂಟಿಲೇಟರ್ ಮತ್ತು ಆಮ್ಲಜನಕ ಸಾಂದ್ರಕಗಳನ್ನು ನೀಡಿದೆ. ಆದರೆ ಪ್ರಸ್ತುತ ಯಾವುದೇ ಕೊರೊನಾ ಲಸಿಕೆಗಳನ್ನು ನೀಡುವ ಸ್ಥಿತಿಯಲ್ಲಿಲ್ಲ' ಎಂದು ಅವರು ಹೇಳಿದರು.
ಇದನ್ನೂ ಓದಿ:ಕೋವಿಡ್ ಸಂಕಷ್ಟದಲ್ಲಿ ಭಾರತ : ಸಹಾಯಕ್ಕೆ ಸಿದ್ಧರೆಂದ ಯುಎಸ್, ಬ್ರಿಟನ್ ಸರ್ಕಾರ
ಈ ಹಿಂದೆ ಯುನೈಟೆಡ್ ಕಿಂಗ್‌ಡಮ್ ಭಾರತಕ್ಕೆ ಪ್ರಮುಖ ಆಮ್ಲಜನಕ ಸಾಧನಗಳನ್ನು ಪೂರೈಕೆ ಮಾಡಿದೆ. ಅಷ್ಟೇ ಅಲ್ಲದೆ, ಕೊರೊನಾ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ಘೋಷಿಸಿದೆ.
ಹೆಚ್ಚಿನ ವೈದ್ಯಕೀಯ ಸಾಧನಗಳನ್ನು ಒದಗಿಸುವ ಮೂಲಕ ಭಾರತವನ್ನು ಬೆಂಬಲಿಸಲು ಉತ್ತರ ಐರ್ಲೆಂಡ್‌ನ ಹೆಚ್ಚುವರಿ ಸ್ಟಾಕ್‌ಗಳಿಂದ ಮೂರು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಕಳುಹಿಸುವುದಾಗಿ ಯುಕೆ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಹೇಳಿದ್ದಾರೆ. ಈ ಆಮ್ಲಜನಕ ಘಟಕಗಳು ಪ್ರತಿ ನಿಮಿಷಕ್ಕೆ 500 ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಒಂದು ಸಮಯದಲ್ಲಿ ಸುಮಾರು 50 ಜನರಿಗೆ ಆಮ್ಲಜನಕ ಬಳಸಬಹುದಾಗಿದೆ.
ಭಾರತಕ್ಕೆ ಬೆಂಬಲ ಸೂಚಿಸುವ ಕ್ರಮವನ್ನು ಯುಕೆ ಇತ್ತೀಚೆಗೆ ಪ್ರಕಟಿಸಿದ್ದು, 495 ಆಮ್ಲಜನಕ ಸಾಂದ್ರಕಗಳು ಮತ್ತು 200 ವೆಂಟಿಲೇಟರ್‌ಗಳನ್ನು ಈಗಾಗಲೇ ಹೆಚ್ಚುವರಿಯಾಗಿ ಪೂರೈಸಿದೆ.