ಸಿಲಿಗುರಿ(ಪಶ್ಚಿಮ ಬಂಗಾಳ):ಕಾಡಿನ ಚಿಲುಮೆಯ ನೀರು ಸ್ವಚ್ಛವಾಗಿರುತ್ತಿದೆ. ಹಾಗಂತ ಪಶ್ಚಿಮ ಬಂಗಾಳದ ಸಿಲಿಗುರಿಯ ಒಬ್ಬ ವ್ಯಕ್ತಿ ಒಸರು ನೀರನ್ನು ಕುಡಿದು ಸಂಕಷ್ಟಕ್ಕೆ ಒಳಗಾಗಿದ್ದಾನೆ. ನೀರಿನ ಜೊತೆ ಜಿಗಣೆ(Leech)ಯನ್ನೂ ನುಂಗಿದ್ದು ಅದು ಶ್ವಾಸನಾಳದಲ್ಲಿ ಸಿಲುಕಿಕೊಂಡು ಸಮಸ್ಯೆಗೆ ಒಳಗಾಗಿದ್ದ. ಈಗ ವೈದ್ಯರು ಚಿಕಿತ್ಸೆ ಮಾಡಿ ತೆಗೆದಿದ್ದಾರೆ. ಆದರೆ ಜಿಗಣೆ ನುಂಗಿ 15 ದಿನ ಆದರೂ ಜೀವಂತ ಆಗಿದ್ದದ್ದು ವೈದ್ಯರಲ್ಲಿ ಅಚ್ಚರಿ ಮೂಡಿಸಿದೆ.
ಹದಿನೈದು ದಿನಗಳ ನಂತರ ವೈದ್ಯರು ಅಪರೂಪದ ಶಸ್ತ್ರಕ್ರಿಯೆ ನಡೆಸಿ ಜೀವಂತವಾಗಿದ್ದ ಜಿಗಣೆಯನ್ನು ಶ್ವಾಸನಾಳದಿಂದ ಹೊರತೆಗೆದಿದ್ದಾರೆ. ರೋಗಿಯನ್ನು ಸಾವಿನ ದವಡೆಯಿಂದ ರಕ್ಷಿಸಿದ್ದಕ್ಕಾಗಿ ರೋಗಿಯ ಕುಟುಂಬವು ಆಸ್ಪತ್ರೆಯ ವೈದ್ಯರಿಗೆ ಸಾಕಷ್ಟು ಧನ್ಯವಾದ ಹೇಳಿದ್ದಾರೆ.
ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೂಲಗಳ ಪ್ರಕಾರ, ಮಿರಿಕ್ನ ಸಜಿನ್ ರೈ (49) 15 ದಿನಗಳ ಹಿಂದೆ ಸ್ಥಳೀಯ ಚಿಲುಮೆಯಿಂದ ನೀರು ಕುಡಿಯಲು ಯತ್ನಿಸಿದಾಗ ಜಿಗಣೆ ಗಂಟಲಲ್ಲಿ ಸಿಲುಕಿಕೊಂಡಿತ್ತು. ನಂತರ ಅದು ಕ್ರಮೇಣ ಶ್ವಾಸನಾಳಕ್ಕೆ ಚಲಿಸಿತು. ಅಂದಿನಿಂದ, ಅವರು ಅಸ್ವಸ್ಥರಾಗಿದ್ದರು. ಸ್ಥಳೀಯ ಆಸ್ಪತ್ರೆಯವರ ಸಲಹೆಯ ಮೆರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಹೋಗಲು ಸಲಹೆ ನೀಡಲಾಗಿತ್ತು.