ಕರ್ನಾಟಕ

karnataka

ETV Bharat / bharat

ವಿಶಾಖಪಟ್ಟಣಂನಲ್ಲಿ ಕುಸಿದ ನಿರ್ಮಾಣ ಹಂತದ ಬ್ರಿಡ್ಜ್: ಇಬ್ಬರು ಸ್ಥಳದಲ್ಲೇ ಸಾವು

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಿರ್ಮಾಣ ಹಂತದಲ್ಲಿದ್ದ ಬ್ರಿಡ್ಜ್ ಕುಸಿದ ಪರಿಣಾಮ ಕಾರಿನಲ್ಲಿ ತೆರಳುತ್ತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.

bridge-collapsed-in-national-highway-in-vishakhapattanam-two-died
ಕುಸಿದ ನಿರ್ಮಾಣ ಹಂತದ ಬ್ರಿಡ್ಜ್: ಇಬ್ಬರು ಸ್ಥಳದಲ್ಲೇ ಸಾವು

By

Published : Jul 6, 2021, 9:03 PM IST

ವಿಶಾಖಪಟ್ಟಣಂ(ಆಂಧ್ರಪ್ರದೇಶ): ನಿರ್ಮಾಣ ಹಂತದಲ್ಲಿದ್ದಸೇತುವೆ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅನಕಪಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಸೇತುವೆ ಕುಸಿದು ಸೈಡ್​​ ಪಿಲ್ಲರ್​​ ಕಾರಿನ ಮೇಲೆ ಬಿದ್ದ ಪರಿಣಾಮವಾಗಿ ದುರ್ಘಟನೆ ಸಂಭವಿಸಿದೆ. ಈ ವೇಳೆ ಕಾರು ಸೇರಿದಂತೆ ಮತ್ತೊಂದು ಭಾರೀ ವಾಹನ ಸಂಪೂರ್ಣವಾಗಿ ಜಖಂಗೊಂಡಿದೆ.

ಬ್ರಿಡ್ಜ್ ಉರುಳಿದ ಸ್ಥಳ

ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು, ಇನ್ನೂ ಕೆಲವರು ಪಿಲ್ಲರ್​ನ ಕೆಳಗೆ ಸಿಲುಕಿರುವ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ.

ಸುಮಾರು ಎರಡು ವರ್ಷಗಳಿಂದ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅನಕಪಲ್ಲಿಯ ಜಂಕ್ಷನ್​ನಲ್ಲಿ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತಿತ್ತು. ಈಗ ಆ ಬ್ರಿಡ್ಜ್​ ಕುಸಿದುಬಿದ್ದಿದೆ.

ಇದನ್ನೂ ಓದಿ: JEE Mains ಪರೀಕ್ಷೆಗೆ ಸಿದ್ಧರಾಗಿ..ದಿನಾಂಕ ಪ್ರಕಟಗೊಂಡಿದೆ ನೋಡಿ..

ಈಗ ಬ್ರಿಡ್ಜ್​ನ ಗುಣಮಟ್ಟದ ಬಗ್ಗೆ ಆತಂಕ ಮೂಡಿದೆ. ದುರಂತ ನಡೆದ ವೇಳೆ ಸ್ಥಳದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಪೊಲೀಸರ ತನಿಖೆಯ ನಂತರ ಕಾರಣ ಗೊತ್ತಾಗಲಿದೆ.

ABOUT THE AUTHOR

...view details