ಪಾಟ್ನಾ:ಬಿಹಾರದ ಭಾಗಲ್ಪುರದಲ್ಲಿ 1711 ಕೋಟಿ ರೂಪಾಯಿ ವೆಚ್ಚದ ನಿರ್ಮಾಣ ಹಂತದಲ್ಲಿದ್ದ ಬೃಹತ್ ಸೇತುವೆ ಕುಸಿದ ಬೆನ್ನಲ್ಲೇ, ಮತ್ತೊಂದು ಸೇತುವೆ ಕುಸಿದುಬಿದ್ದಿದೆ. ಕಿಶನ್‌ಗಂಜ್ ಜಿಲ್ಲೆಯಲ್ಲಿ ಈ ಘಟನೆ ಶುಕ್ರವಾರ ನಡೆದಿದೆ. ಕತಿಹಾರ್ ಮತ್ತು ಕಿಶನ್‌ಗಂಜ್ ಜಿಲ್ಲೆಗಳನ್ನು ಸಂಪರ್ಕಿಸುವ NH 327E ನಲ್ಲಿ ಗೋರಿ ಗ್ರಾಮದ ಬಳಿ ಮೆಚಿ ನದಿಗೆ ಅಡ್ಡಲಾಗಿರುವ ಸೇತುವೆ ಇದಾಗಿದ್ದು, ಇದೀಗ ಧರಾಶಾಯಿಯಾಗಿದೆ.
ಭಾಗಲ್ಪುರ ಘಟನೆಯ ಬಳಿಕ ಸಿಎಂ ನಿತೀಶ್ ಕುಮಾರ್ ಅವರು ಸೇತುವೆಗಳ ಮೇಲೆ ನಿಗಾ ಇಡಲು ಸೂಚಿಸಿದ ಬಳಿಕ ಮತ್ತೊಂದು ಮುಖ್ಯ ಸೇತುವೆ ನೆಲಸಮವಾಗಿದೆ. ಇದು ಕತಿಹಾರ್ ಮತ್ತು ಕಿಶನ್‌ಗಂಜ್ ಜಿಲ್ಲೆಗಳನ್ನು ಸಂಪರ್ಕಿಸುತ್ತಿದ್ದು, ಗೋರಿ ಗ್ರಾಮದ ಬಳಿ ಮೆಚಿ ನದಿಯ ಮೇಲೆ ಇದನ್ನು ನಿರ್ಮಿಸಲಾಗಿದೆ.
ಶುಕ್ರವಾರದಂದು ಸೇತುವೆಯ 6 ಆಧಾರಸ್ತಂಭಗಳು ಕುಸಿದಿವೆ. ಇದರಿಂದ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ವಿಷಯ ತಕ್ಷಣ ಸ್ಥಳಕ್ಕಾಗಮಿಸಿ ಜಿಲ್ಲಾಡಳಿತ, ಅಪಾಯಕಾರಿ ಸೇತುವೆಯ ಮೇಲಿನ ಸಂಚಾರವನ್ನು ನಿಷೇಧಿಸಿದೆ. ವಾಹನ ಸವಾರರನ್ನು ತಡೆಯಲು ಎರಡೂ ಬದಿಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಖಾಸಗಿ ಸಂಸ್ಥೆಯೊಂದು ಈ ಸೇತುವೆಯನ್ನು ನಿರ್ಮಾಣ ಮಾಡಿದೆ. ಹಳೆಯ ಸೇತುವೆಯಾಗಿದ್ದ ಕಾರಣ ಅದರ ಕಂಬಗಳು ಹದಗೆಟ್ಟಿದ್ದವು. ಆದರೂ ಯಾವುದೇ ದುರಸ್ತಿ ಮತ್ತು ಪರ್ಯಾಯ ವ್ಯವಸ್ಥೆ ಮಾಡದ ಕಾರಣ ಅದು ಕುಸಿದು ಬಿದ್ದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಸಂತಸದ ಸಂಗತಿ.
1716 ಕೋಟಿ ಸರ್ವನಾಶ:ಇದಕ್ಕೂ ಮೊದಲು ಕೆಲ ದಿನಗಳ ಹಿಂದೆ ಬಿಹಾರದ ಭಾಗಲ್ಪುರದಲ್ಲಿ 1711 ಕೋಟಿ ರೂಪಾಯಿ ವೆಚ್ಚದ ನಿರ್ಮಾಣ ಹಂತದಲ್ಲಿದ್ದ ಬೃಹತ್ ಸೇತುವೆ ಕುಸಿದು ಬಿದ್ದಿತ್ತು. ಸುಲ್ತಾನ್ ಗಂಜ್ ಮತ್ತು ಅಗುವಾನಿ ನಡುವೆ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಇದಾಗಿದ್ದು, ಧರಾಶಾಯಿಯಾಗಿದೆ. ಇದನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಎಲ್ಲೆಡೆ ವೈರಲ್ ಆಗಿದೆ.
ಸುಲ್ತಾನ್ ಗಂಜ್ ಮತ್ತು ಅಗುವಾನಿ ನಡುವೆ ಗಂಗಾನದಿಗೆ ಈ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು. ಈ ಸೇತುವೆಯ ಕೆಲ ಕಂಬಗಳು ಕುಸಿದಿದ್ದು, ಸೇತುವೆ ಭಾಗಶಃ ಗಂಗಾ ನದಿ ಪಾಲಾಗಿದೆ. ಸುಮಾರು ನೂರು ಮೀಟರ್ ಉದ್ದದ ಸೇತುವೆ ಮುಳುಗಡೆಯಾಗಿದೆ. ಈ ಹಿಂದೆಯೂ ಈ ಸೇತುವೆ ಕುಸಿದು ಬಿದ್ದಿತ್ತು. ಈ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಮತ್ತೊಮ್ಮೆ ಸೇತುವೆ ಕುಸಿದಿರುವುದು ಸೇತುವೆಯ ಕಳಪೆ ಕಾಮಗಾರಿ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಾಜ್ಯ ಸೇತುವೆ ನಿರ್ಮಾಣ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಯೋಗೇಂದ್ರ ಕುಮಾರ್, ಕೆಲವು ಕಂಬಗಳು ಕುಸಿದು ಸೇತುವೆ ಬಿದ್ದಿದೆ. ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಸಂಸ್ಥೆಯ ಬಗ್ಗೆ ಕ್ರಮಕ್ಕೆ ಸೂಚಿಸಲಾಗುವುದು ಎಂದಿದ್ದರು.
ನಾವೇ ಕೆಡವಿದ್ದೇವೆ:ಇದನ್ನು ಸೇತುವೆ ಕುಸಿತ ತೀವ್ರ ಚರ್ಚೆಗೀಡಾದ ಬಳಿಕ ಮುಜುಗರಕ್ಕೀಡಾದ ಸರ್ಕಾರ ಕಳಪೆ ಮತ್ತು ಅವೈಜ್ಞಾನಿಕವಾಗಿದ್ದ ಸೇತುವೆಯನ್ನು ನಾವೇ ಕೆಡವಲು ಸೂಚಿಸಿದ್ದೆವು ಎಂದು ತಿಳಿಸಿತ್ತು. ಜನರ ತೆರಿಗೆ ಹಣದಲ್ಲಿ 1716 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಸೇತುವೆ ನಿರ್ಮಾಣ ಹಂತದಲ್ಲೇ ಬಿದ್ದಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ಬಗ್ಗೆ ಸಿಎಂ ನಿತೀಶ್ ಕುಮಾರ್ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ಎಸ್‌ಪಿ ಸಿಂಗ್ಲಾ ಹೆಸರಿನ ಖಗಾರಿಯಾ ಸೇತುವೆ ನಿರ್ಮಾಣ ಸಂಸ್ಥೆ ಇದನ್ನು ನಿರ್ಮಿಸುತ್ತಿತ್ತು.
ಇದನ್ನೂ ಓದಿ: ಕುಸಿದು ಬಿತ್ತು ನಿರ್ಮಾಣ ಹಂತದ ಬೃಹತ್ ಸೇತುವೆ ವಿಡಿಯೋ