ಕರ್ನಾಟಕ

karnataka

ETV Bharat / bharat

ಡಾಲಿ ಕಿ ಡೋಲಿ ರೀತಿ ಸಿನಿಮೀಯ ಘಟನೆ: ಮದುವೆ ನೆಪದಲ್ಲಿ ಲೂಟಿ ಹೊಡೆಯುತ್ತಿದ್ದ ವಧು ಈಗ ಪೊಲೀಸರ ಅತಿಥಿ...

ಶಿವಂಗಿ ಸಿಸೋಡಿಯಾ, ಪಿಂಕಿ ಗೌತಮ್ ಮತ್ತು ಸವಿತಾ ಶಾಸ್ತ್ರಿ ಎಂಬ ವಿಭಿನ್ನ ಹೆಸರುಗಳಿಂದ ಮಹಿಳೆಯೊಬ್ಬಳು ಪುರುಷರನ್ನು ಮದುವೆಯಾಗುತ್ತಿದ್ದಳು. ನಂತರ ಅವರ ನಗದು, ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳ ಜೊತೆಗೆ ಕಣ್ಮರೆಯಾಗುತ್ತಿದ್ದಳು . ಹೀಗೆ ವಂಚನೆಗೆ ಒಳಗಾಗಿದ್ದ ಜಿತೇಂದ್ರ ಗೌತಮ್ (ವೃತ್ತಿಯಲ್ಲಿ ಕಾನ್ಸ್​​​​​ಟೇಬಲ್​) ದೂರಿನ ಮೇರೆಗೆ ಆರೋಪಿತೆ 'ವಧು' ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ.

By ETV Bharat Karnataka Team

Published : Oct 10, 2023, 11:18 AM IST

bride who went on looting spree finally arrested in kanpur
ಮದುವೆ ನೆಪದಲ್ಲಿ ಲೂಟಿ ಹೊಡೆಯುತ್ತಿದ್ದ ವಧು ಪೊಲೀಸರ ಅತಿಥಿ

ಕಾನ್ಪುರ (ಉತ್ತರ ಪ್ರದೇಶ):ಸೋನಂ ಕಪೂರ್ ಅಭಿನಯದ ಬಾಲಿವುಡ್ ಚಿತ್ರ 'ಡಾಲಿ ಕಿ ಡೋಲಿ'ಯ ಕಥೆಯನ್ನೇ ಹೋಲುವ ಘಟನೆಯೊಂದು ನಡೆದಿದೆ. ಹೌದು, ತನ್ನ ಹೆಸರಗಳನ್ನು ಬದಲಿಸಿಕೊಂಡು ಆದಾಯ ತೆರಿಗೆ ಇನ್ಸ್‌ಪೆಕ್ಟರ್‌ನಂತೆ ನಟಿಸಿ ಪುರುಷರನ್ನು ಮದುವೆಯಾಗಿ, ನಂತರ ಬೆಲೆ ಬಾಳುವ ವಸ್ತುಗಳ ಸಮೇತ ಪರಾರಿಯಾಗುತ್ತಿದ್ದ 'ವಧು'ವನ್ನು ಕಾನ್ಪುರ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಶಿವಂಗಿ ಸಿಸೋಡಿಯಾ, ಪಿಂಕಿ ಗೌತಮ್ ಮತ್ತು ಸವಿತಾ ಶಾಸ್ತ್ರಿ ಎಂಬ ವಿಭಿನ್ನ ಹೆಸರುಗಳಿಂದ ಮಹಿಳೆಯು ಅನುಮಾನಾಸ್ಪದ ಪುರುಷರನ್ನು ಮದುವೆಯಾಗುತ್ತಿದ್ದಳು. ನಂತರ ಅವರ ನಗದು, ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳ ಜೊತೆಗೆ ಕಣ್ಮರೆಯಾಗುತ್ತಿದ್ದಳು. ಆಕೆಯ ವಂಚನೆಗೆ ಒಳಗಾಗಿದ್ದ ಜಿತೇಂದ್ರ ಗೌತಮ್ (ವೃತ್ತಿಯಲ್ಲಿ ಕಾನ್ಸ್​ಟೇಬಲ್​ ) ಅವರ ದೂರಿನ ಮೇರೆಗೆ ಆರೋಪಿತೆ 'ವಧು' ಸಿಕ್ಕಿಬಿದ್ದಿದ್ದಾಳೆ. ಈ ಮಹಿಳೆಯು ಜಿತೇಂದ್ರ ಗೌತಮ್​ಗೆ 10 ಲಕ್ಷ ರೂಪಾಯಿ ವಂಚನೆ ಮಾಡಿದ್ದಳು. ಆಕೆಯ ಬಗ್ಗೆ ಅನುಮಾನಗೊಂಡ ಜಿತೇಂದ್ರ ಗೌತಮ್​ ಪೊಲೀಸರಿಗೆ ದೂರು ನೀಡಿದ್ದರು.

ಝಾನ್ಸಿ ಮೂಲದ ಕಾನ್ಸ್​ಟೇಬಲ್​, ಫಜಲ್‌ಗಂಜ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 2016 ರಲ್ಲಿ ಅವರು ಸಾಮಾಜಿಕ ಜಾಲಾತಾಣದ ಮೂಲಕ ಝಾನ್ಸಿಯ ಖುಷಿಪುರದ ಶಿವಂಗಿ ಸಿಸೋಡಿಯಾ, ಸವಿತಾ ದೇವಿ, ಪಿಂಕಿ ಗೌತಮ್ ಅವರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದರು. ಆಕೆಯನ್ನು ಮದುವೆಯಾಗಲು ನಿರ್ಧರಿಸಿದ್ದರು. ಮದುವೆಗೆ ಮುಂಚೆಯೇ, ಎಸ್‌ಯುವಿ ಕಾರ್​ ಖರೀದಿಸಲು ಕಾನ್ಸ್​ಟೇಬಲ್​​​ ನಿಂದ 6.21 ಲಕ್ಷ ರೂಪಾಯಿ ತೆಗೆದುಕೊಂಡಿದ್ದಳು. ಆದರೆ, ಇಲ್ಲಿಯವರೆಗೂ ಕಾನ್ಸ್​ಟೇಬಲ್​ ಆ ಕಾರ್​ನ್ನು ಸ್ವೀಕರಿಸಿಲ್ಲ, ಹಣವನ್ನು ಕೂಡ ಹಿಂದಿರುಗಿಸಿಲ್ಲ. ಸ್ಕಾರ್ಪಿಯೋ ಎಸ್‌ಯುವಿ ಬಗ್ಗೆ ಮಹಿಳೆಯನ್ನು ಕೇಳಿದರೆ, ತಮ್ಮ ನಂಬರ್ ವೇಟಿಂಗ್ ಲಿಸ್ಟ್‌ನಲ್ಲಿದ್ದು, ಶೀಘ್ರದಲ್ಲೇ ಕಾರ್​ ಬರಲಿದೆ ಎಂದು ಹೇಳುತ್ತಾರೆ" ಎಂದು ನಜೀರಾಬಾದ್ ಇನ್ಸ್​​ಪೆಕ್ಟರ್​ ಕೌಶಲೇಂದ್ರ ಪ್ರತಾಪ್ ಸಿಂಗ್ ಹೇಳಿದರು.

''ಆಕೆಯ ಸಂಬಂಧಿಕರೂ ಸಹ ನಕಲಿಯಾಗಿದ್ದಾರೆ. ಕಾನ್ಸ್‌ಟೇಬಲ್ ಒಮ್ಮೆ ಕರ್ತವ್ಯದಿಂದ ಮನೆಗೆ ಹಿಂದಿರುಗಿದಾಗ ಇನ್ನೊಬ್ಬ ವ್ಯಕ್ತಿಯೊಂದಿಗೆ ಅವಳು ಹೋಗುತ್ತಿದ್ದಳಂತೆ. ಅವಳ ಜೊತೆಗೆ ಇದ್ದ ಅಪರಿಚಿತನ ಬಗ್ಗೆ ಕಾನ್ಸ್​​ಟೇಬಲ್​​ ಕಣ್ಣಿಡಲು ಪ್ರಾರಂಭಿಸಿದನು. ನಂತರ, ಅಪರಿಚಿತ ವ್ಯಕ್ತಿ ಝಾನ್ಸಿಯ ಮೌರಾನಿಪುರದ ನಿವಾಸಿ ಸೋನು ಆಕೆಯ ಪ್ರೇಮಿ ಎಂದು ಗೊತ್ತಾಗಿದೆ. ಶಿವಾಂಗಿಯು ಈಗಾಗಲೇ ಝಾನ್ಸಿಯ ನಿವಾಸಿ ಬ್ರಿಜೇಂದ್ರನನ್ನು ಮದುವೆಯಾಗಿದ್ದಾಳೆ. ಅವಳೊಂದಿಗೆ ಝಾನ್ಸಿಯಲ್ಲಿ ವಾಸಿಸುತ್ತಿದ್ದ ಇಬ್ಬರು ಮಕ್ಕಳನ್ನು ಸಹ ಕಂಡಿದ್ದೇನೆ'' ಎಂದು ಕಾನ್ಸ್​​ಟೇಬಲ್​​ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.

ಪೊಲೀಸರು ಶಿವಾಂಗಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ವಂಚನೆಯಲ್ಲಿ ಇತರರ ಕೈವಾಡವಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶಿವಾಂಗಿ ವಿರುದ್ಧ ಸುಲಿಗೆ, ನಂಬಿಕೆ ದ್ರೋಹ, ವಂಚನೆ ಮತ್ತು ಎರಡನೇ ಮದುವೆಯ ಐಪಿಸಿ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಲಾಗುತ್ತದೆ. ಆಕೆಯ ಮದುವೆಗೆ ಸಂಬಂಧಿಕರಂತೆ ನಟಿಸಿದರು ಆಕೆಯ ವಂಚನೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ ಎಂದು ಎಂದು ನಜೀರಾಬಾದ್ ಇನ್ಸ್​​ಪೆಕ್ಟರ್​ ತಿಳಿಸಿದ್ದಾರೆ.

ಇದನ್ನೂ ಓದಿ:ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಾಟದ 1 ಕೋಟಿ ರೂ. ಮೊತ್ತದ ಚಿನ್ನ ವಶ

ABOUT THE AUTHOR

...view details