ಹಮೀರ್ಪುರ(ಉತ್ತರ ಪ್ರದೇಶ):ಮದುವೆ ಸಮಾರಂಭದ ವೇಳೆ ಏಕಾಏಕಿ ಕೊರಳಿಗೆ ಹಾರ ಹಾಕಿದ್ದಕ್ಕಾಗಿ ಕೋಪಗೊಂಡಿರುವ ವಧು, ವರನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ.
ಸ್ವಾಸಾ ಬಡ್ಜ್ ಗ್ರಾಮದಲ್ಲಿ ಮದುವೆ ಸಮಾರಂಭ ಏರ್ಪಟ್ಟಿತ್ತು. ಜೈಮಾಲಾ ಹಾಗೂ ರವಿಕಾಂತ್ ಸಪ್ತಪದಿ ತುಳಿಯಬೇಕಾಗಿತ್ತು. ವೇದಿಕೆ ಮೇಲೆ ವಧು-ವರರು ನಿಂತಿದ್ದರು. ವರ ತಾನು ಕೈಯಲ್ಲಿ ಹಿಡಿದುಕೊಂಡಿದ್ದ ಹೂವಿನ ಹಾರವನ್ನು ದಿಢೀರ್ ವಧುವಿನ ಕೊರಳಿಗೆ ಹಾಕೇ ಬಿಟ್ಟ. ಈ ವೇಳೆ ತಾನಿನ್ನೂ ಸಂಪೂರ್ಣವಾಗಿ ಸಿದ್ಧಗೊಂಡಿಲ್ಲ ಎಂದು ಕುಪಿತಗೊಂಡ ವಧು, ಎರಡು ಸಲ ಕಪಾಳಮೋಕ್ಷ ಮಾಡಿದ್ದಾಳೆ. ಬಳಿಕ ವೇದಿಕೆಯಿಂದ ಇಳಿದು ಹೊರಟೇ ಹೋದಳು.