ಪಶ್ಚಿಮ ಚಂಪಾರಣ್ (ಬಿಹಾರ): ಎರಡೂ ಕುಟುಂಬಸ್ಥರು ಮದುವೆ ಸಂಭ್ರಮದಲ್ಲಿರುವಾಗ ವರನ ಮುಖ ನೋಡಿದ ವಧು ನನಗೆ ಈ ಮದುವೆ ಬೇಡ ಎಂದು ವಿವಾಹ ಮಂಟದದಿಂದ ಎದ್ದು ನಡೆದಿದ್ದಾಳೆ.
ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ನೌತಾನ್ ಬ್ಲಾಕ್ ಪ್ರದೇಶದ ದೇವಾಲಯದಲ್ಲಿ ವಿವಾಹ ಸಮಾರಂಭ ನಡೆಯುತ್ತಿತ್ತು. ಬಂಧು - ಬಳಗದೊಂದಿಗೆ ಸಾವಿರಾರು ಜನರು ನೆರೆದಿದ್ದರು. ಇದಕ್ಕೂ ಮುನ್ನ ನೇರವಾಗಿ ವರನನ್ನು ನೋಡಿರದ ಆಕೆಗೆ ವಾಟ್ಸ್ಆ್ಯಪ್ ಮೂಲಕ ಮಧುಮಗನ ಫೋಟೋ ಕಳುಹಿಸಲಾಗಿತ್ತು ಅಷ್ಟೇ.
ಇದನ್ನೂ ಓದಿ: ವಾಟ್ಸ್ಆ್ಯಪ್ನಿಂದ ಗುಡ್ನ್ಯೂಸ್: ಡೆಸ್ಕ್ಟಾಪ್ ಆ್ಯಪ್ ಮೂಲಕವೂ ವಿಡಿಯೋ, ವಾಯ್ಸ್ ಕಾಲ್ ಸೌಲಭ್ಯ!
ತಾಳಿ ಕಟ್ಟುವ ವೇಳೆ ವರನ ಮುಖ ನೋಡಿದ ವಧುಗೆ ಶಾಕ್ ಆಗಿದೆ. ವಾಟ್ಸ್ಆ್ಯಪ್ನಲ್ಲಿರುವ ಫೋಟೋಗೂ ಈತನ ನಿಜ ರೂಪಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂದು ಆರೋಪಿಸಿದ ಯುವತಿ ಮಂಟಪದಿಂದ ಎದ್ದು ಮದುವೆಗೆ ನಿರಾಕರಿಸಿದ್ದಾಳೆ.
ಯುವತಿಯ ನಡೆ ನೋಡಿ ವರನ ಕಡೆಯವರು ಗಲಾಟೆ ಮಾಡಿದ್ದಾರೆ. ವಧುವಿನ ಪೋಷಕರು ಮನವೊಲಿಸಲು ಪ್ರಯತ್ನಿಸಿದರೂ ಆಕೆ ಒಪ್ಪಲಿಲ್ಲ. ಎರಡೂ ಕುಟುಂಬಗಳ ನಡುವೆ ಜಗಳ ತಾರಕಕ್ಕೇರಿದೆ. ಗ್ರಾಮದ ಹಿರಿಯರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದು, ವರನ ಕಡೆಯವರು ಹಾಗೇಯೇ ಹಿಂದಿರುಗಿದ್ದಾರೆ.