ಮಥುರಾ(ಉತ್ತರ ಪ್ರದೇಶ): ಹಿರಿಯರು ಒಪ್ಪಿ ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ವರನೊಂದಿಗೆ ಮದುವೆ ಮಾಡಿಕೊಳ್ಳಲು ವಧು ಹಿಂದೇಟು ಹಾಕಿದ್ದಾಳೆ. ಹೀಗಾಗಿ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಹುಡುಗಿಯೋರ್ವಳಿಗೆ ತಾಳಿ ಕಟ್ಟಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮಥುರಾ ಜಿಲ್ಲೆಯ ಮಂತ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕೆಲವೇ ನಿಮಿಷಗಳಲ್ಲಿ ವಧುವಿಗೆ ತಾಳಿ ಕಟ್ಟಬೇಕಾಗಿತ್ತು. ಈ ವೇಳೆ ಆಕೆ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾಳೆ. ತನಿಗೆ ವರ ಇಷ್ಟವಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಆಕೆಯ ಮನವೊಲಿಕೆ ಮಾಡಲು ಅನೇಕ ಸಲ ಪ್ರಯತ್ನಪಟ್ಟರು ವಿಫಲವಾಗಿದೆ. ತನಿಗೆ ವಧು ಇಷ್ಟವಿಲ್ಲ. ಯಾವುದೇ ಕಾರಣಕ್ಕೂ ಆತನೊಂದಿಗೆ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿ ಕಾಲ್ಕಿತ್ತಿದ್ದಾಳೆ.