ಕರ್ನಾಟಕ

karnataka

ETV Bharat / bharat

ಮದುವೆ ಹಿಂದಿನ ವಾರ ಎಸ್ಕೇಪ್​.. Facebook Lover​​ ಭೇಟಿಗಾಗಿ ಹರಿದ್ವಾರದಿಂದ ತಮಿಳುನಾಡಿಗೆ ಬಂದ್ಳು! - ಲವರ್​​ ಭೇಟಿಗೋಸ್ಕರ ತಮಿಳುನಾಡಿಗೆ ಬಂದ ಯುವತಿ

ಫೇಸ್​​ಬುಕ್​ ಲವರ್​​ಗೋಸ್ಕರ ಯುವತಿಯೋರ್ವಳು ಹರಿದ್ವಾರದಿಂದ ತಮಿಳುನಾಡಿಗೆ ತೆರಳಿದ್ದು, ಆಕೆಯನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

girl reached tamilnadu for lover
girl reached tamilnadu for lover

By

Published : Dec 7, 2021, 8:18 PM IST

ಹರಿದ್ವಾರ(ಉತ್ತರಾಖಂಡ):ಸಾಮಾಜಿಕ ಜಾಲತಾಣಗಳಾದ ಫೇಸ್​​ಬುಕ್​​, ಇನ್ಸ್​ಟಾಗ್ರಾಂ ಮೂಲಕ ಪರಸ್ಪರ ಪರಿಚಯವಾಗಿ, ಪ್ರೀತಿಯ ಬಲೆಗೆ ಬಿದ್ದು ಮದುವೆ ಮಾಡಿಕೊಂಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ಆದರೆ ಇಲ್ಲೋರ್ವ ಯುವತಿ ತನ್ನ ಫೇಸ್​​ಬುಕ್​ ಲವರ್​​​ ಭೇಟಿಯಾಗಲು ಉತ್ತರಾಖಂಡದಿಂದ ತಮಿಳುನಾಡಿಗೆ ಬಂದಿದ್ದಾಳೆ.

ಏನಿದು ಪ್ರಕರಣ?

ಹರಿದ್ವಾರದ ಯುವತಿಯೋರ್ವಳು ಫೇಸ್​​​ಬುಕ್​ ಮೂಲಕ ಪರಿಚಯವಾದ ತಮಿಳುನಾಡಿನ ಯುವಕನ ಪ್ರೀತಿಯ ಬಲೆಗೆ ಬಿದ್ದು, ಆತನನ್ನ ಲವ್ ಮಾಡಲು ಶುರು ಮಾಡಿದ್ದಾಳೆ. ಆದರೆ, ಮನೆಯವರು ಬೇರೆ ಯುವಕನೊಂದಿಗೆ ಮದುವೆ ಫಿಕ್ಸ್​ ಮಾಡಿ, ಅದ್ಧೂರಿಯಾಗಿ ವಿವಾಹ ನೆರವೇರಿಸಲು ನಿರ್ಧರಿಸಿದ್ದರು. ಈ ಬಗ್ಗೆ ತಲೆಕೆಡಿಸಿಕೊಳ್ಳದ ಯುವತಿ ಮದುವೆಗೆ ಕೇವಲ ಒಂದು ವಾರ ಬಾಕಿ ಇರುವಾಗಲೇ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು.

ಇದರಿಂದ ಆತಂಕಕ್ಕೊಳಗಾಗಿರುವ ಕುಟುಂಬಸ್ಥರು, ಹರಿದ್ವಾರದ ರಾಣಿಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ. ತೀವ್ರ ಹುಡುಕಾಟ ನಡೆಸಿದರೂ ಆಕೆಯ ಬಗ್ಗೆ ಯಾವುದೇ ರೀತಿಯ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ.

ಇದನ್ನೂ ಓದಿರಿ:'ಮಹಿಳೆ ಮನೆಯೇ ಪೆಟ್ರೋಲ್​​ ಅಡ್ಡಾ': 110 ರೂ. ಬದಲು 77ಕ್ಕೆ ಮಾರಾಟ.. ಏನಿದರ ಕರಾಮತ್ತು?

ಫೇಸ್​​ಬುಕ್​ ಅಕೌಂಟ್​​ನಿಂದ ಸಿಕ್ತು ಸುಳಿವು

ಪೊಲೀಸರು ಯುವತಿಯ ಫೇಸ್​​​ಬುಕ್​​ ಅಕೌಂಟ್​​​​​ ಪರಿಶೀಲನೆ ನಡೆಸಿದಾಗ ತಮಿಳುನಾಡಿನ ಯುವಕನ ಪ್ರೀತಿಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ಈ ವೇಳೆ ತಡಮಾಡದ ಪೊಲೀಸರ ತಂಡ ತಮಿಳುನಾಡಿಗೆ ತೆರಳಿದ್ದು, ಅಲ್ಲಿ ಫೇಸ್​ಬುಕ್​​​​ ಯುವಕನೊಂದಿಗೆ ಆಕೆ ಇರುವುದನ್ನ ಪತ್ತೆ ಹಚ್ಚಿದ್ದಾರೆ. ಜೊತೆಗೆ ತಮ್ಮೊಂದಿಗೆ ವಾಪಸ್ ಕರೆದುಕೊಂಡು ಬರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ.

ABOUT THE AUTHOR

...view details