ಲಕ್ನೋ (ಉತ್ತರ ಪ್ರದೇಶ): ಮದುವೆ ಅನ್ನೋದು ಅಪರೂಪದ, ಜೀವನದಲ್ಲಿ ಒಮ್ಮೆ ಮಾತ್ರ ಅನುಭವಿಸುವ ಸಂದರ್ಭ. ಇಂಥ ಸ್ಮರಣೀಯ ಘಳಿಗೆಯಲ್ಲಿ ಇಲ್ಲೊಬ್ಬ ವಧು ತಮ್ಮ ಸಂಬಂಧಿಕರೊಬ್ಬರು ನೀಡಿದ ರಿವಾಲ್ವರ್‌ನಿಂದ ನಾಲ್ಕು ಸುತ್ತು ಗುಂಡು ಹಾರಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಘಟನೆಯ ನಂತರ ಆಕೆ ಪರಾರಿಯಾಗಿದ್ದಾರೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶುಕ್ರವಾರ ತಡರಾತ್ರಿ ಉತ್ತರ ಪ್ರದೇಶದ ಹತ್ರಾಸ್ ಜಂಕ್ಷನ್ ಪ್ರದೇಶದ ಸೇಲಂಪುರ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಧು-ವರರು ಪರಸ್ಪರ ಮದುವೆಯ ಹೂಮಾಲೆ ವಿನಿಮಯ ಮಾಡಿಕೊಂಡು, ಬಂಧು ಮಿತ್ರರ ಆಶೀರ್ವಾದ ಪಡೆದುಕೊಂಡಿದ್ದಾರೆ. ಆ ನಂತರ ವಧು ವರನ ಜೊತೆಗೆ ವೇದಿಕೆಯ ಮೇಲೆ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ :ಪೆಗಾಸಸ್ ಬಳಿಕ ಕಾಗ್ನೈಟ್ ಸ್ಪೈವೇರ್ ಖರೀದಿಗೆ ಕೇಂದ್ರ ಸರ್ಕಾರ ಯತ್ನ: ಕಾಂಗ್ರೆಸ್ ಗಂಭೀರ ಆರೋಪ
ಸ್ವಲ್ಪ ಸಮಯದ ನಂತರ ಕಪ್ಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ವೇದಿಕೆಯ ಮೇಲೆ ಬಂದು ಲೋಡ್ ಮಾಡಿದ ರಿವಾಲ್ವರ್ ಅನ್ನು ವಧುವಿನ ಕೈಗೆ ನೀಡುತ್ತಾರೆ. ವಧು ಐದು ಸೆಕೆಂಡುಗಳಲ್ಲಿ ನಾಲ್ಕು ಸುತ್ತು ಗುಂಡು ಹಾರಿಸುತ್ತಾರೆ. ಗುಂಡು ಹಾರಿಸಿದ ನಂತರ ಹಿಂಭಾಗದಲ್ಲಿ ನಗುತ್ತಿದ್ದ ವ್ಯಕ್ತಿಗೆ ಬಂದೂಕನ್ನು ವಧು ಹಸ್ತಾಂತರಿಸುತ್ತಾಳೆ.