ಖಾಗರಿಯಾ (ಬಿಹಾರ): ವರ ತೊದಲುವುದು ಕಂಡು ವಧು ಮದುವೆಯನ್ನೇ ನಿಲ್ಲಿಸಿರುವ ಘಟನೆ ಜಿಲ್ಲೆಯ ರಹಿಮ್ಪುರ್ ಎಂಬ ಗ್ರಾಮದಲ್ಲಿ ಬುಧವಾರ ನಡೆದಿದೆ. ಮದುವೆಯ ಹಿಂದಿನ ದಿನ ವಧು ವರರ ಮಾಲೆ ಬದಲಾವಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದರಂತೆ ವರನ ಕಡೆಯ ಕುಟುಂಬದವರು ಅದ್ಧೂರಿಯಾಗಿ ಮೆರವಣಿಗೆ ಮೂಲಕ ವರನನ್ನು ಕಲ್ಯಾಣ ಮಂಟಪಕ್ಕೆ ಕರೆತಂದಿದ್ದರು. ಬಳಿಕ ಸಂಪ್ರದಾಯದಂತೆ ಹೂ ಮಾಲೆ ಬದಲಾವಣೆ ಕಾರ್ಯಕ್ರಮಕ್ಕೆ ವಧು ವರರನ್ನು ವೇದಿಕೆಗೆ ಎರಡು ಕುಟುಂಬದವರು ಕರೆ ತಂದಿದ್ದಾರೆ.
ವೇದಿಕೆಗೆ ಬಂದಂತಹ ಜೋಡಿಗಳು ಹೂ ಮಾಲೆ ಬದಲಾವಣೆಗೆ ಸಿದ್ದರಾಗಿದ್ದರು, ಈ ವೇಳೆ, ವರ ತನ್ನ ಸಹೋದರನೊಂದಿಗೆ ಮಾತನಾಡುತ್ತಿರುವುದನ್ನ ವಧು ಗಮನಿಸಿದ್ದು, ವರ ಮಾತನಾಡುವಾಗ ತೊದಲುವುದು ಕಂಡು ಬಂದಿದೆ. ಬಳಿಕ ಹೂ ಮಾಲೆ ಬದಲಾವಣೆ ಕಾರ್ಯಕ್ರಮ ಮುಗಿದಿದೆ. ನಂತರ ಎರಡು ಕುಟುಂಬಗಳು ಮುಂದಿನ ಕಾರ್ಯಕ್ರಮಕ್ಕೆ ಮುಂದಾದಾಗ ಮೌನ ಮುರಿದ ವಧು, ವರನಿಗೆ ಮಾತನಾಡಲು ಹೇಳಿದ್ದಾಳೆ. ಈ ವೇಳೆ ಮತ್ತೆ ವರ ತೊದಲುವುದು ಕಂಡು ಬಂದಿದೆ.