ಗಾಜಿಪುರ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ವಿಚಿತ್ರ ಮದುವೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಧಾನಿ ಹೆಸರು ಹೇಳಲು ಮದುಮಗ ವಿಫಲನಾದ ಕಾರಣಕ್ಕೆ ಆತನ ತಮ್ಮನೊಂದಿಗೆ ಮಧುವಿಗೆ ಮದುವೆ ಮಾಡಿಸಲಾಗಿದೆ. ಈಗ ಮದುವೆ ಮಾಡಿಸಿದ ವ್ಯಕ್ತಿಗೆ ಮದುವೆ ವಯಸ್ಸಾಗಿಲ್ಲ ಎಂದು ತಂದೆಯ ಕುಟುಂಬಸ್ಥರು ಹೇಳಿದ್ದಾರೆ.
ಸಂಪೂರ್ಣ ವಿವರ: ಇಲ್ಲಿನ ಕರಂದ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ 27 ವರ್ಷದ ಯುವಕನಿಗೆ ಏಳು ತಿಂಗಳ ಹಿಂದೆ ಪಕ್ಕದ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯ ಮಾಡಲಾಗಿತ್ತು. ಅಂದಿನಿಂದ ಹುಡುಗ ಮತ್ತು ಹುಡುಗಿ ಮೊಬೈಲ್ ಫೋನ್‌ನಲ್ಲಿ ಪರಸ್ಪರ ಮಾತನಾಡುತ್ತಿದ್ದರು. ಜೂನ್ 11ರಂದು ಈ ಜೋಡಿಗೆ ಮದುವೆ ಮಾಡಲಾಗಿದೆ. ಮರುದಿನದ ಕಾರ್ಯಗಳಲ್ಲಿ ವಧುವಿನ ಕಡೆಯವರು ವರನಿಗೆ ತಮಾಷೆ ಮಾಡುತ್ತಿದ್ದರು.
ಇದನ್ನೂ ಓದಿ:Bride secret: ಮಧುಚಂದ್ರದ ದಿನವೇ ಪತ್ನಿ ಹೆಣ್ಣಲ್ಲ ಎಂದು ತಿಳಿಯಿತು.. ಮರ್ಯಾದೆ ವಿಷ್ಯ ಎಂದು ಸುಮ್ಮನಿದ್ದ ಯುವಕನಿಗೆ ಏಳು ವರ್ಷದ ನಂತರ ಸಿಕ್ತು ವಿಚ್ಛೇದನ!
ಇದೇ ವೇಳೆ, ವಧುವಿನ ಸಂಬಂಧಿಯೊಬ್ಬರು ನಮ್ಮ ದೇಶದ ಪ್ರಧಾನಿಯ ಹೆಸರು ಏನೆಂದು ವರನಿಗೆ ಹೇಳಿದ್ದಾರೆ. ಆದರೆ, ಆತನಿಗೆ ಪ್ರಧಾನಿ ಹೆಸರು ಹೇಳಲು ಸಾಧ್ಯವಾಗಿಲ್ಲ. ಇದರಿಂದ ಅವರು ಗೇಲಿ ಮಾಡಲು ಶುರು ಮಾಡಿದ್ದಾರೆ. ವರನನ್ನು ಮಾನಸಿಕವಾಗಿ ದುರ್ಬಲ ಎಂದು ವಧುವಿನ ಕಡೆಯವರು ಕರೆಯಲು ಆರಂಭಿಸಿದ್ದರು ಎನ್ನಲಾಗಿದೆ. ಅಲ್ಲದೇ, ಸ್ಥಳದಲ್ಲೇ ಇದ್ದ ವರನ ಕಿರಿಯ ಸಹೋದರನೊಂದಿಗೆ ವಧುವಿಗೆ ಮರು ಮದುವೆ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ವರನ ತಂದೆ ಮಾತನಾಡಿ, "ಪ್ರಧಾನಿ ಹೆಸರು ಹೇಳಲಾದ ಕಾರಣಕ್ಕೆ ಹಿರಿಯ ಮಗನಿಗೆ ವಧುವಿನ ಕಡೆಯವರು ಅಪಮಾನ ಮಾಡಿದ್ದಾರೆ. ಕಿರಿಯ ಮಗನಿಗೆ ಬಲವಂತದಿಂದ ಅದೇ ಯುವತಿಗೆ ಮದುವೆ ಮಾಡಿಸಿದ್ದಾರೆ. ಆದರೆ, ಕಿರಿಯ ಮಗ ಇನ್ನೂ ಚಿಕ್ಕವ. ಹೀಗಿದ್ದರೂ ನಾವು ಹೆದರಿಸಿ ಮಾಡಿಸಿದ ಮದುವೆಗೆ ಒಪ್ಪಿಕೊಂಡು ಸೊಸೆಯೊಂದಿಗೆ ಮನೆಗೆ ಬಂದೆವು. ಶನಿವಾರ ಇದ್ದಕ್ಕಿದ್ದಂತೆ ಹುಡುಗಿಯ ಕಡೆಯವರು ನನ್ನ ಮನೆಗೆ ಬಂದು ಸೊಸೆಯನ್ನು ಮನೆಗೆ ಕಳುಹಿಸಿಕೊಡುವಂತೆ ಒತ್ತಡ ಹೇರಲು ಆರಂಭಿಸಿದ್ದಾರೆ. ಸೊಸೆಯನ್ನು ಕಳುಹಿಸಿಕೊಡಲು ನಾವು ನಿರಾಕರಿಸಿದವು. ಆಗ ಆಕೆಯನ್ನು ಬಲವಂತವಾಗಿ ಎಳೆದುಕೊಂಡು ಹೋಗಲು ಯತ್ನಿಸಿದರು. ಆದ್ದರಿಂದ ನಾನು ಪೊಲೀಸ್ ಸಹಾಯವಾಣಿ ಸಂಖ್ಯೆ 112ಗೆ ಕರೆ ಮಾಡಿ ವಿಷಯ ಮುಟ್ಟಿಸಿದೆ" ಎಂದು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ವಂದನಾ ಪ್ರತಿಕ್ರಿಯಿಸಿ, "ಈ ಗಲಾಟೆಯ ಮಾಹಿತಿ ಗಮನಕ್ಕೆ ಬಂದಾಗ ಸ್ಥಳಕ್ಕೆ ಭೇಟಿ ನೀಡಲಾಯಿತು. ನಂತರ ಎರಡೂ ಕಡೆಯವರನ್ನು ಠಾಣೆಗೆ ಕರೆಸಲಾಯಿತು. ಆದರೆ, ಯುವಕನ ಮನೆಯವರು ಠಾಣೆಗೆ ಆಗಮಿಸಿದರು. ಅವರು ಬರಲಿಲ್ಲ. ಯುವತಿಯ ಕುಟುಂಬಸ್ಥರನ್ನು ವಿಚಾರಿಸದೇ ಬಳಿಕವೇ ಬಳಿಕ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮುಸ್ಲಿಂ ವ್ಯಾಪಾರಿಯೊಂದಿಗೆ ಮದುವೆಗೆ ಕೋರ್ಟ್ ಮೊರೆ ಹೋದ ಹಿಂದೂ ಮಹಿಳಾ ಪೊಲೀಸ್ ಅಧಿಕಾರಿ