ಲಖನೌ (ಉತ್ತರಪ್ರದೇಶ): ಅದು ಮದುವೆ ಮನೆ, ಅಲ್ಲಿ ಬಂದು ಬಾಂಧವರೆಲ್ಲ ನೆರೆದಿದ್ದರು. ಎಲ್ಲರಲ್ಲೂ ಸಂಭ್ರಮ ಕಳೆಗಟ್ಟಿತ್ತು. ನವಜೋಡಿಗೆ ವಿವಾಹಕ್ಕೆ ಆಗಮಿಸಿದವರೆಲ್ಲ ಹಾರೈಸುತ್ತ, ಫೋಟೋಗೆ ಪೋಸ್ ನೀಡುತ್ತಿದ್ದರು. ಪೋಷಕರ ಮನದಲ್ಲಿ ಸಂತಸ ಮನೆಮಾಡಿತ್ತು. ಮಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಳು ಎಂಬ ನೆಮ್ಮದಿ ಅವರಲ್ಲಿತ್ತು. ಆದ್ರೆ ಈ ಸಂತಸ ಮತ್ತು ನೆಮ್ಮದಿ ಕೇವಲ ಕ್ಷಣಿಕ ಅನ್ನುವಷ್ಟರ ಮಟ್ಟಿಗೆ ವಿಧಿಯಾಟವೇ ಬೇರೆಯಾಗಿತ್ತು.
ಹೌದು, ಮದುವೆಯ ಸಮಾರಂಭದಲ್ಲಿ ವಧು ಮಾಲೆ ವಿನಿಮಯ ಮಾಡುವ ವೇಳೆ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಲಖನೌ ಪ್ರದೇಶದ ಮಲಿಹಾಬಾದ್‌ನ ಭದ್ವಾನಾ ಗ್ರಾಮದಲ್ಲಿ ನಡೆದಿದೆ.